ಗಾಂಧಿನಗರ SSF ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವಕ್ಕೆ ಚಾಲನೆ

0

ಎಸ್ ಎಸ್ ಎಫ್ ಸಂಘಟನೆಯ ವತಿಯಿಂದ ಆಯೋಜಿಸಲಾಗಿರುವ ಸಾಹಿತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ವತಿಯಿಂದ ಸಾಹಿತ್ಯೋತ್ಸವ ಕಾರ್ಯಕ್ರಮ ಗಾಂಧಿನಗರ ಸುನ್ನಿ ಸೆಂಟರ್ ವಠಾರದಲ್ಲಿ ನಡೆಯಿತು. ಡಿಸೆಂಬರ್ 16 ರಂದು ವೇದಿಕೇತರ ಸ್ಪರ್ಧಾ ಕಾರ್ಯಕ್ರಮಗಳ ಮೂಲಕ ಸಾಹಿತ್ಯೋತ್ಸವ ಆರಂಭಗೊಂಡಿತು. ಡಿ.17ರಂದು ಧ್ವಜಾರೋಹಣದ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ನಡೆಯಲಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮವನ್ನು ಸುನ್ನೀ ಜಮೀಯತುಲ್ ಉಲಮಾ ಅಧ್ಯಕ್ಷರಾದ ಸೈಯ್ಯಿದ್ ಕುಂಞಿ ಕೋಯಾ ತಂಙಳ್ ಸಅದಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಟ್ಟೆಕ್ಕಾರ್ಸ್ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಸಮಿತಿ ಸುಳ್ಯ ಸರ್ಕಲ್‌ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಮುಖಂಡರುಗಳಾದ ಎಸ್ ಪಿ ಅಬೂಬಕರ್,ಮಹಮ್ಮದ್ ಸಿ ಎ ನಾವೂರು,ಅಬೂಬಕ್ಕರ್ ಜಟ್ಟಿಪಳ್ಳ,ನೌಶಾದ್ ಕೆರೆಮೂಲೆ,ಸಿದ್ದಿಕ್ ಬಿ ಎ,ಮಹಮ್ಮದ್ ಪೈಂಟರ್,ಎಸ್ ಎಸ್ ಎಫ್ ಸೆಕ್ಟರ್ ಅಧ್ಯಕ್ಷ ಬಶೀರ್ ಕಲ್ಲುಮಟ್ಲು,ಆರಿಫ್ ಬುಶ್ರಾ,ಆಸಿಫ್ ಜಯನಗರ,ಇರ್ಫಾನ್ ಏಣಾವರ,ರುನೈಝ್ ಕಲ್ಲುಗುಂಡಿ, ಮೊದಲಾದವರು ಉಪಸ್ಥಿತರಿದ್ದರು.
ನೌಶಾದ್ ಕೆರೆಮೂಲೆ ಸ್ವಾಗತಿಸಿ ಮಸೂದ್ ಹಿಮಮಿ ಏಣಾವರ ವಂದಿಸಿದರು.


ಸಾಹಿತ್ಯೋತ್ಸವದಲ್ಲಿ 5 ಶಾಖೆಗಳ 300 ಕ್ಕೂ ಅಧಿಕ ಸದಸ್ಯರುಗಳು ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆದು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.