Home ಪ್ರಚಲಿತ ಸುದ್ದಿ ಪಂಜ :ಐವತ್ತೊಕ್ಲು ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು -ಉಳ್ಳಾಲ್ತಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಜಾತ್ರೋತ್ಸವ ಸಮಿತಿ...

ಪಂಜ :ಐವತ್ತೊಕ್ಲು ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು -ಉಳ್ಳಾಲ್ತಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಜಾತ್ರೋತ್ಸವ ಸಮಿತಿ ರಚನೆ

0

ಐತಿಹಾಸಿಕ ಪುಣ್ಯಕ್ಷೇತ್ರ ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು- ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ದೈವಸ್ಥಾನದ 2025 ನೇ ಸಾಲಿನ ಜಾತ್ರೋತ್ಸದ ಉತ್ಸವ ಸಮಿತಿಯು ಮಾ.13 ರಂದು ಶ್ರೀ ಉಳ್ಳಾಕುಲು- ಉಳ್ಳಾಲ್ತಿ ದೇವಸ್ಥಾನದ ವಠಾರದಲ್ಲಿ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ರಾಮತೋಟ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ಕುಸುಮಾಧರ ಕರಿಮಜಲು ಉಪಸ್ಥಿತರಿದ್ದರು. ಸಭೆಯಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು, ದೈವ ಪರಿಚಾರಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಅಭಿವೃದ್ಧಿ ಹಾಗೂ ಜಾತ್ರೋತ್ಸವಕ್ಕೆ ಸಂಬಂಧಿಸಿದಂತೆ ಸೂಕ್ತ ಸಲಹೆ ಸೂಚನೆ ನೀಡಿದರು.

ಏಪ್ರಿಲ್ ತಿಂಗಳ ಮೇಷ 9ರಂದು ಸಂಜೆ ಭಂಡಾರ ತೆಗೆಯುವುದರ ಮೂಲಕ ಶ್ರೀ ಅರಸುಉಳ್ಳಾಕಲು ದೈಗಳ ನೇಮೋತ್ಸವದೊಂದಿಗೆ ಪ್ರಾರಂಭಗೊಂಡು ಮರುದಿನ ಪ್ರಾತಕಾಲ ನಾಲ್ಕಕ್ಕೆ ಶ್ರೀ ಉಳ್ಳಾಳ್ತಿ ಅಮ್ಮನವರ ನೇಮ ಬೆಳಿಗ್ಗೆ ( ಮೇಷ 10 ) ಶ್ರೀ ಉಳ್ಳಾಕುಲು ದೇವಗಳ ನೇಮ ಹಾಗೂ ಪರಿವಾರ ದೈವಗಳ ನೇಮ, ರಾತ್ರಿ ಧರ್ಮದೈವ ಪರಿವಾರ ದೈವಗಳ ನೇಮೋತ್ಸವದೊಂದಿಗೆ ಮುಕ್ತಾಯಗೊಳ್ಳುವ ಮುಕ್ತಾಯಗೊಳ್ಳುವುದು. ಜಾತ್ರೋತ್ಸವ ಸಮಿತಿಯ
ಅಧ್ಯಕ್ಷರಾಗಿ ಕುಸುಮಾಧರ ಕೆರೆಯಡ್ಕ ,
ಕಾರ್ಯದರ್ಶಿಯಾಗಿ ಜಗದೀಶ್ ಕೋಟ್ಯಡ್ಕ,ಖಜಾಂಜಿಯಾಗಿ ನಿತಿನ್ ತೋಟ
ಉಪಾಧ್ಯಕ್ಷರಾಗಿ ಜಯರಾಮ್ ಕೋಟ್ಯಡ್ಕ ಆಯ್ಕೆಯಾದರು.ಇದೇ ವೇಳೆ ವಿವಿಧ ಸಮಿತಿಗಳ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

NO COMMENTS

error: Content is protected !!
Breaking