ಮೂವರಿಗೆ ಗಾಯ
ಅರಂತೋಡು ಪೇಟೆಯ ಬಳಿ ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿಯಾಗಿ ಮೂವರು ಗಾಯಗೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಇದೀಗ ನಡೆದಿದೆ.

ಸಂಪಾಜೆ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಬೈಕ್ ಹಾಗೂ ಸುಳ್ಯದಿಂದ ಅರಂತೋಡು ಕಡೆ ಹೋಗುತ್ತಿದ್ದ ಬೈಕಿನ ಮಧ್ಯೆ ಈ ಅಪಘಾತ ಸಂಭವಿಸಿದ್ದು ಓರ್ವ ಗಾಯಾಳುವಿನ ಹೆಬ್ಬೆರಳು ತುಂಡಾಗಿ ರಸ್ತೆಯಲ್ಲಿ ಬಿದ್ದಿದೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಆಸ್ಪತ್ರೆಗೆ ಕರೆತರಲಾಗಿದೆ. ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಾಗಿದೆ.
