ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರ ಆಪ್ತ ಕಾರ್ಯದರ್ಶಿಯಾಗಿ ತಾಲೂಕು ಪಂಚಾಯತ್ ಮ್ಯಾನೇಜರ್ ಹರೀಶ್ ಕೆ.ಯವರು ನೇಮಕಗೊಂಡಿದ್ದಾರೆ.
ಶಾಸಕರ ಕಾರ್ಯದರ್ಶಿಯಾಗಿ ಈ ಮೊದಲು ಪಿಡಿಒ ಅವಿನಾಶ್‌ರವರು ಸರಕಾರದಿಂದ ನೇಮಕಗೊಂಡಿದ್ದಾರೆ. ಕೆಲ ಸಮಯದಿಂದ ಆಪ್ತ ಕಾರ್ಯದರ್ಶಿ ಸ್ಥಾನ ಖಾಲಿಯಾಗಿತ್ತು. ಇದೀಗ ಹರೀಶ್ ಕೆ.ಯವರನ್ನು ನೇಮಕಗೊಳಿಸಿ ಫೆ..೧೯ರಂದು ಸರಕಾರ ಆದೇಶ ಮಾಡಿದೆ. ಮಾ.೧೦ರಂದು ಜಿಲ್ಲಾ ಪಂಚಾಯತ್‌ನಿಂದ ತಾಲೂಕು ಪಂಚಾಯತ್‌ಗೆ ಆದೇಶ ಬಂದಿದೆ. ಎಪ್ರಿಲ್ ಮೊದಲ ವಾರದಲ್ಲಿ ಹರೀಶ್ ರವರು ಆಪ್ತ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆಂದು ತಿಳಿದು ಬಂದಿದೆ.
೨೦೧೦ರಲ್ಲಿ ಪಿಡಿಒ ಆಗಿ ಜಾಲ್ಸೂರು ಗ್ರಾ.ಪಂ. ಗೆ ಬಂದಿದ್ದ ಹರೀಶ್ ಕೆ.ಯವರು , ೨೦೧೫ರಿಂದ ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಮ್ಯಾನೇಜರ್ ಆಗಿ ಪ್ರಭಾರದಲ್ಲಿದ್ದರು. ಇವರು ಕಾಸರಗೋಡಿನ ಮಧೂರಿನವರು.