ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವಕ್ಕೆ ಚಾಲನೆ

0

ಅದ್ದೂರಿಯ ಹಸಿರುವಾಣಿ ಮೆರವಣಿಗೆ – ಕಲವರ ನಿರಕ್ಕಲ್

ಆಲೆಟ್ಟಿ ಗ್ರಾಮ ವ್ಯಾಪ್ತಿಯ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ದೈವಗಳ ದೈವಂಕಟ್ಟು ಮಹೋತ್ಸವ ಇಂದಿನಿಂದ ಆರಂಭಗೊಂಡಿದೆ.
ಪೂರ್ವಾಹ್ನ ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಹಸಿರುವಾಣಿ ಮೆರವಣಿಗೆಯು ಸಾಂಗವಾಗಿ ನಡೆಯುವಂತೆ ಪ್ರಾರ್ಥಿಸಲಾಯಿತು.

ಪಯಸ್ವಿನಿ ಸೇತುವೆ ಬಳಿ ನಿರ್ಮಿಸಲಾದ ಮಹಾದ್ವಾರದಿಂದ ಅದ್ದೂರಿ ಹಸಿರುವಾಣಿ ಮೆರವಣಿಗೆಗೆ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈಯವರು ತೆಂಗಿನಕಾಯಿಯ ಒಡೆದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ತರವಾಡು ಮನೆಯ ಮುಖ್ಯಸ್ಥರು, ಉಪ ಸಮಿತಿ ಸಂಚಾಲಕರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.

ಮಹಿಳೆಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಚೆಂಡೆ ವಾದ್ಯ ಘೋಷದೊಂದಿಗೆ ಹಾಗೂ ಕುಣಿತ ಭಜನೆಯೊಂದಿಗೆ ಆಕರ್ಷಕ ಮೆರವಣಿಗೆಯು ದೈವಸ್ಥಾನದ ತನಕ ಸಾಗಿ ಬಂತು. ಬಳಿಕ ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಸ್ಥಾನಿಕರು ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಕುರಿತು ಪ್ರಾರ್ಥನೆ ನೆರವೇರಿಸಿದರು.

ಬಳಿಕ ದೈವದ ದರ್ಶನ ಪಾತ್ರಿಯವರಿಂದ ದರ್ಶನ ಸೇವೆಯಾಗಿ ಸುಮೂಹೂರ್ತದಲ್ಲಿ (ಕಲವರ ನಿರಕ್ಕಲ್) ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು.