ಕುಕ್ಕುಜಡ್ಕ ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

0

ಸಾಧಕರಿಗೆ ಸನ್ಮಾನ ಹಾಗೂ ಒಕ್ಕೂಟದ ಉತ್ತಮ ಸಂಘಗಳಿಗೆ ಪುರಸ್ಕಾರ

ಅಮರಮುಡ್ನೂರಿನ ಕುಕ್ಕುಜಡ್ಕದ
ಶ್ರೀ ವಿಷ್ಣು ಸಂಜೀವಿನಿ ಮಹಿಳಾ ಒಕ್ಕೂಟದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಪಂಚಾಯತ್ ಸಭಾಭವನದಲ್ಲಿ ಮಾ.15 ರಂದು ನಡೆಯಿತು.

ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸುಮ.ಬಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅದ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಉಪಾಧ್ಯಕ್ಷೆ ಭುವನೇಶ್ವರಿ,ಪಂ. ಸದಸ್ಯರಾದ
ಸೀತಾ.ಹೆಚ್,
ತೇಜಾವತಿ,ಪದ್ಮಪ್ರಿಯಾ ಮೇಲ್ತೋಟ, ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕ ಮಹೇಶ್,ಕೃಷಿ ಜೀವನೋಪಾಯ ವ್ಯವಸ್ಥಾಪಕ ಜೀವನ್ ಪ್ರಕಾಶ್,ರೂಪಾ ,ಒಕ್ಕೂಟದ ಕಾರ್ಯದರ್ಶಿ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಹೈನುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಭವ್ಯ ಪಿಲಿಕಜೆ,ಮಲ್ಲಿಗೆ ಕೃಷಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ ಲಲಿತ, ಲಕ್ಷಿ ಮತ್ತು ಶ್ರೀಲತಾ,
ಒಕ್ಕೂಟದ ಮಾಜಿ ಅಧ್ಯಕ್ಷೆ ಪುಷ್ಪಾವತಿ,ಘನ ತ್ಯಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೀತಾ ರವರನ್ನುಸನ್ಮಾನಿಸಲಾಯಿತು. ಒಕ್ಕೂಟದ 2 ಉತ್ತಮ ಸಂಘವನ್ನು ಆಯ್ಕೆಅಭಿನಂದಿಸಲಾಯಿತು.
ಶ್ರೀಮತಿ ಲಲಿತಲಕ್ಷ್ಮಿ ವರದಿ ವಾಚಿಸಿದರು.
ಎಂ.ಬಿ.ಕೆ ಮೋಹಿನಿ.ಹೆಚ್
ಲೆಕ್ಕ ಪತ್ರ ಮಂಡಿಸಿದರು.
ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಶ್ರೀಮತಿ ಸರೋಜ ಸಂಕೇಶ ಪ್ರಾರ್ಥಿಸಿದರು. ಶ್ರೀಮತಿ ಮೋಹಿನಿ ಹೆಚ್ ಸ್ವಾಗತಿಸಿದರು.
ಗೀತಾ ವಂದಿಸಿದರು. ಎಲ್.ಸಿ.ಆರ್.ಪಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.