
ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಾಕಾಳಿ ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ದಿಗೆ ಶಾಸಕರ ಅನುದಾನದಿಂದ ೬ ಲಕ್ಷದ ೫೦ ಐವತ್ತು ಸಾವಿರ ಬಿಡುಗಡೆಗೊಂಡಿದ್ದು, ಗುದ್ದಲಿ ಪೂಜಾ ಕಾರ್ಯಕ್ರಮ ನಡೆಯಿತು.

ಶಾಸಕಿ ಕು ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿದರು.
ಕ್ಷೇತ್ರದ ಪುರೋಹಿತರಾದ ಬಾಲಕೃಷ್ಣ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮುರುಳ್ಯ ಎಣ್ಮೂರು ಸೊಸೈಟಿ ಅಧ್ಯಕ್ಷ ವಸಂತ ನಡುಬೈಲು, ನಿರ್ದೇಶಕ ರೂಪರಾಜಾ ರೈ ಕೆ, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ, ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಸದಸ್ಯರಾದ ಕರುಣಾಕರ ಗೌಡ ಹುದೇರಿ, ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಗೋಳ್ತಿಲ, ಕ್ಷೇತ್ರದ ಅನುವಂಶಿಕ ಆಡಳ್ತೆದಾರ ಚಿನ್ನಯ ಆಚಾರ್ಯ, ಆಡಳಿತ ಮಂಡಳಿ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜನಾರ್ಧನ ಆಚಾರ್ಯ, ಕಾರ್ಯದರ್ಶಿ ಸಂಜಯ ಆಚಾರ್ಯ, ಕೇರ್ಪಡ ದೇವಸ್ಥಾನ ಸಮಿತಿ ಸದಸ್ಯ ವೆಂಕಪ್ಪ ಗೌಡ ಆಲಾಜೆ, ಪೂದೆ ದೇವಸ್ಥಾನದ ಮಾಜಿ ಅಧ್ಯಕ್ಷ ಪದ್ಮನಾಭ ಪೂದೆ, ಮುರುಳ್ಯ ಹಾಲು ಸೊಸೈಟಿ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಊರುಸಾಗು, ಜಗದೀಶ್ ಆಚಾರ್ಯ, ರಾಜಶೇಖರ ಪುರೋಹಿತರು ನೂಜಾಡಿ, ರೋಹಿತ್ ಕೊಡ್ಡೋಳ್, ಶೇಖರ್ ಸಾಲ್ಯಾನ್ ಕುಕ್ಕಟ್ಟೆ ಇನ್ನಿತರರು ಉಪಸ್ಥಿತರಿದ್ದರು.
