
ನಾಗಶ್ರೀ ಫ್ರೆಂಡ್ಸ್ ಸುಳ್ಯ ಇದರ ವತಿಯಿಂದ ಮಾ. 23 ರಂದು ಸುಳ್ಯದ ಪ್ರಭು ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಹಿಳೆಯರ ಮುಕ್ತ ಹಾಗೂ ಪುರುಷರ ೫೨೫ ಕೆಜಿ ಲೆವೆಲ್ ಮಾದರಿಯ ಹಗ್ಗಜಗ್ಗಾಟ ಹಾಗೂ ಸುಳ್ಯ, ಕಡಬ ತಾಲೂಕುಗಳ ಮಹಿಳೆಯರ ತ್ರೋಬಾಲ್ ಪಂದ್ಯಾಟ ನಾಗಶ್ರೀ ಟ್ರೋಫಿ 2025 ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ನಾಗಶ್ರೀ ತಂಡದ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ತಿಲಕ ನವೀನ್ ಆರ್ತಾಜೆ ಪಡುಮಜಲು, ತಂಡದ ಉಪಾಧ್ಯಕ್ಷೆ ಮಮತಾ ಯು.ಡಿ., ಕಾರ್ಯದರ್ಶಿ ರಮ್ಯ ಪವನ್ ಉಳುವಾರು, ಅಕ್ಷತಾ, ಪ್ರಮೀಳಾ, ಕುಮಾರಿ ಧರ್ಮಪಾಲ, ಕವಿನಾ ದೇವಿಪ್ರಸಾದ್, ಶಿವಶಾಂತಿ, ಪ್ರೇಮಾ ಆತ್ಮಾನಂದ ಗಬ್ಬಲಡ್ಕ, ಹೇಮಾವತಿ ಕವಿತಾ ನೆಕ್ರಾಜೆ, ಶಿಲ್ಪಾ, ಚಂಪಾ, ನವೀನ್‌ಕುಮಾರ್ ಜಿ., ಚಿದಾನಂದ ಕೆ.ಸಿ. ಮೊದಲಾದವರು ಈ ಸಂದರ್ಭದಲ್ಲಿದ್ದರು.