Home ಪ್ರಚಲಿತ ಸುದ್ದಿ ಸುಳ್ಯ: ಎನ್.ಎಂ.ಸಿ. ಎನ್.ಎಸ್.ಎಸ್.ಗೆ ರಾಜ್ಯ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ, ಚಿತ್ರಲೇಖ ಕೆ.ಎಸ್.ರಿಗೆ ಅತ್ಯುತ್ತಮ ಯೋಜನಾಧಿಕಾರಿ...

ಸುಳ್ಯ: ಎನ್.ಎಂ.ಸಿ. ಎನ್.ಎಸ್.ಎಸ್.ಗೆ ರಾಜ್ಯ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ, ಚಿತ್ರಲೇಖ ಕೆ.ಎಸ್.ರಿಗೆ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಸ್ವೀಕಾರ

0

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಎನ್.ಎಸ್.ಎಸ್. ಘಟಕಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ ಹಾಗೂ ಯೂನಿಟ್ ಫಸ್ಟ್ ಯೋಜನಾಧಿಕಾರಿ ಚಿತ್ರಲೇಖ ಕೆ.ಎಸ್. ರವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಯೋಜನಾಧಿಕಾರಿ ಪುರಸ್ಕಾರ ಲಭಿಸಿದ್ದು, ಪ್ರಶಸ್ತಿ ಪ್ರದಾನ‌ ಕಾರ್ಯಕ್ರಮವು ಬೆಂಗಳೂರಿನ ಗಾಜಿನ ಮನೆ ರಾಜಭವನ ದಲ್ಲಿ ಮಾ. 17ರಂದು ನಡೆಯಿತು. ರಾಜ್ಯಪಾಲರು ಪ್ರಶಸ್ತಿ ಪ್ರದಾನ‌ ಮಾಡಿದರು. ಎನ್. ಎಂ.ಸಿ ಪ್ರಾಂಶುಪಾಲರಾದ ರುದ್ರಕುಮಾರ್ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಚಿತ್ರಲೇಖ ಪ್ರಶಸ್ತಿ ಸ್ವೀಕರಿಸಿದರು.

NO COMMENTS

error: Content is protected !!
Breaking