
ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಯೋಜನೆಯ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ನೇತೃತ್ವದಲ್ಲಿ ಮಾ 17 ರಂದು ಸುಳ್ಯದ ಅನ್ಸಾರಿಯ ಸಭಾ ಭವನದಲ್ಲಿ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸುಳ್ಯ ತಹಶೀಲ್ದಾರ್ ಮಂಜುಳಾ ರವರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರುಗಳು ಭಾಗವಹಿಸಿದ್ದರು.

ಸುಳ್ಯ ತಹಶೀಲ್ದಾರ್ ಮಂಜುಳಾ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ,ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪಗೌಡ,ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ ಸದಾನಂದ ಮಾವಜಿ, ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಕೆ.ಪಿ.ಜಾನಿ, ಸುಳ್ಯ ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ, ಸೂಡಾ ಅಧ್ಯಕ್ಷ ಮುಸ್ತಫ ಜನತಾ,ಕೆ ವಿ ಜಿ ಇಂಜಿನಿಯರಿಂಗ್ ಕಾಲೇಜಿನ ಉಜ್ವಲ್ ಊರುಬೈಲು,ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು, ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಎಡಮಲೆ, ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಿ ಡಿ ಪಿ ಓ ಶ್ರೀಮತಿ ಶೈಲಜಾ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಹಾಗೂ ಇನ್ನಿತರ ಮುಖಂಡರುಗಳು ಸೌಹಾರ್ದ ಇಫ್ತಾರ್ ಕೂಟದ ಬಗ್ಗೆ ಮಾತನಾಡಿ ‘ಸಮಾಜದಲ್ಲಿ ಶಾಂತಿ ನೆಲೆಸಲು ಪರಸ್ಪರ ಸೌಹಾರ್ದ ಕೂಟಗಳು ಅಗತ್ಯವಾಗಿದೆ. ಮುಸಲ್ಮಾನರ ಪವಿತ್ರ ತಿಂಗಳಾದ ರಂಜಾನಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನಾಡಿಗೆ ಉತ್ತಮ ಸಂದೇಶವಾಗಿದೆ. ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ ಮತ್ತು ಸೌಹಾರ್ದತೆಯನ್ನು ಬಯಸುವವರಾಗಿದ್ದಾರೆ. ಅದೇ ರೀತಿ ಸುಳ್ಯ ನಾಡು ಕೂಡ ಒಂದು ಸೌಹಾರ್ದತೆಯ ನಾಡಾಗಿದ್ದು ಇಲ್ಲಿಯ ಜನತೆ ಶಾಂತಿ ಸೌಹಾರ್ದತೆಯ ಬದುಕನ್ನು ಕಂಡಿದ್ದಾರೆ.
ನಾವು ಯಾರೊಂದಿಗೂ ದ್ವೇಷದಿಂದ ಇರಬಾರದು.ಎಲ್ಲಾ ಧರ್ಮಗಳು ಪ್ರೀತಿ ಹಾಗೂ ಸೌಹಾರ್ದತೆಯನ್ನು ಕಲಿಸುತ್ತದೆ ಎಂದು ಮಾತನಾಡಿ ಪವಿತ್ರ ರಂಜಾನ್ ತಿಂಗಳ ಶುಭಾಶಯವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಉಪ ತಹಶೀಲ್ದಾರ್ ಮಂಜುನಾಥ್, ಮುಖಂಡರುಗಳಾದ ಪಿ ಎಸ್ ಗಂಗಾಧರ್,ಸಮಾಜ ಸೇವಕ ಖಾದರ್ ಹಾಜಿ ಅಂಚಿನಡ್ಕ, ಎಸ್ ಸಂಸುದ್ದೀನ್ ಅರಂಬೂರು, ನಂದರಾಜ್ ಸಂಕೇಶ್, ಆರ್ ಐ ಅವಿನ್ ರಂಗತ್ತಮಲೆ, ವಿ ಎ ತಿಪ್ಪೇಶ್, ಕೆ ವಿ ಜಿ ಡೆಂಟಲ್ ಕಾಲೇಜಿನ ಆಡಳಿತ ಅಧಿಕಾರಿ ಮಾಧವ, ಮುಖಂಡರಾದ ಪ್ರಸನ್ನ,ಮೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಹರೀಶ್ ನಾಯ್ಕ್, ಸುಪ್ರೀತ್, ಪ್ರಸಾದ್ ಕತ್ತಲಡ್ಕ ಹಾಗೂ ಮುಖಂಡರುಗಳಾದ ಗೋಕುಲ್ ದಾಸ್,ಶಶಿಧರ ಎಂ ಜೆ,ಆದಮ್ ಹಾಜಿ ಕಮ್ಮಾಡಿ,ಅನ್ಸಾರಿಯಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಶಾಫಿ ಕುತ್ತಮೊಟ್ಟೆ,ಇಸ್ಮಾಯಿಲ್ ಪಡ್ಪಿನಂಗಡಿ,ಮಹಮ್ಮದ್ ಕುಂಞಿ ಗೂನಡ್ಕ, ಅಬ್ದುಲ್ ಕಲಾಂ ಸುಳ್ಯ,ನಾಸಿರ್ ಕಟ್ಟೆಕ್ಕಾರ್ಸ್, ಭವಾನಿ ಶಂಕರ್ ಕಲ್ಮಡ್ಕ, ಸುದ್ದಿ ಪತ್ರಿಕೆಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ನಂದರಾಜ್ ಸಂಕೇಶ್, ಚೇತನ್ ಕಜೆಗದ್ದೆ, ಅಬುಶಾಲಿ ಕೆಎಸ್ಆರ್ಟಿಸಿ, ನಝೀರ್ ಶಾಂತಿನಗರ, ಪತ್ರಕರ್ತರುಗಳಾದ ಗಂಗಾಧರ ಕಲ್ಲಪಳ್ಳಿ, ದಯಾನಂದ ಕಲ್ನಾರ್, ರಶೀದ್ ಜಟ್ಟಿಪಳ್ಳ, ತೇಜೇಶ್ವರ ಕುಂದಲ್ಪಾಡಿ,ಕೆ ಟಿ ಭಾಗೇಶ್ ಸೇರಿದಂತೆ ನೂರಾರು ಮಂದಿ ಗಣ್ಯರುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ರಂಜಾನ್ ಪ್ರಯುಕ್ತ ಇಫ್ತಾರ್ ಕಿಟ್ ನೀಡಿ ಗೌರವಿಸಲಾಯಿತು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿ ಕಾರ್ಯಕ್ರಮದ ಸಂಯೋಜಕ ಶಾಹುಲ್ ಹಮೀದ್ ಕುತ್ತಮೊಟ್ಟೆ ಸ್ವಾಗತಿಸಿ,ವಂದಿಸಿದರು.