
ಕೊಲ್ಲಮೊಗ್ರ ದೋಲನ ತರವಾಡು ಮನೆಯಲ್ಲಿ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರರವರ ಆಶೀರ್ವಾದಗಳೊಂದಿಗೆ ಮಾ.15 ರಿಂದ ಮಾ.16 ತನಕ ದೋಲನ ಕುಟುಂಬದ ದೈವಗಳಿಗೆ ತಂಬಿಲ ಸೇವೆ ಮತ್ತು ನೇಮೋತ್ಸವ ನಡೆಯಿತು.

ಮಾ.15 ರಂದು ಶ್ರೀ ಗಣಪತಿ ಹವನ, ದೈವಗಳಿಗೆ ತಂಬಿಲ, ಶ್ರೀ ಹರಿಸೇವೆ , ಶ್ರೀ ಕೆಂಚಿರಾಯನ ಪೂಜೆ , ರಾತ್ರಿ ದೈವಗಳ ಭಂಡಾರ ತೆಗೆದು ಜೋಡು ಶ್ರೀ ಕಲ್ಲುರ್ಟಿ ದೈವ, ಶ್ರೀ ಪಂಜುರ್ಲಿ, ಶ್ರೀ ಧರ್ಮದೈವ ರುದ್ರಚಾಮುಂಡಿ ದೈವ, ಶ್ರೀ ಗುಳಿಗ ದೈವ, ಶ್ರೀ ಅಂಗಾರ ಬಕುಡ ದೈವಗಳ ನೇಮೋತ್ಸವ ನಡೆಯಿತು.
ಕುಟುಂಬದ ಯಜಮಾನರಾದ ಲೋಕಯ್ಯ ಗೌಡ (ಆನಂದ), ಕುಟುಂಬಸ್ಥರು, ಬಂಧುಮಿತ್ರರು, ನೆಂಟರಿಷ್ಟರು, ಊರವರು ಪಾಲ್ಗೊಂಡು ಶ್ರೀ ದೈವ- ದೇವರ ಪ್ರಸಾದ ಸ್ವೀಕರಿಸಿದರು.