ಗೋ ಆಧಾರಿತ ಕೃಷಿಯಿಂದ ಸಂಪತ್ತು ವೃದ್ಧಿ – ಪ್ರಕೃತಿ ಉಳಿಸಲು ಗೋ ಸಂತತಿ ಬೆಳೆಸಿ : ಭಕ್ತಿಭೂಷನ್ ದಾಸ್

0

ಗೋವಿನಿಂದ ಬರಡು ಭೂಮಿಯೂ ಸಂಪದ್ಭರಿತವಾಗುವುದು : ರಾಜೇಶ್ ನಾಯ್ಕ್

ಸುಳ್ಯದಲ್ಲಿ ನಂದಿ ರಥಯಾತ್ರೆಯ ಶೋಭಾಯಾತ್ರೆ- ನಂದಿ ಪೂಜೆ

ಅಕ್ಷಯ್ ಕೆ.ಸಿ.ಯವರಿಗೆ ಅಕ್ಷಯ್ ಆಳ್ವರಿಂದ ಮಲೆನಾಡು ಗಿಡ್ಡ ಕರುಗಳ ಕೊಡುಗೆ

ಗೋ ಆಧಾರಿತ ಕೃಷಿಯಿಂದ ಸಂಪತ್ತು ವೃದ್ಧಿಯಾಗುತ್ತದೆ. ನಮ್ಮ ಪ್ರಕೃತಿ ಕಲುಷಿತವಾಗುತ್ತಿದೆ. ಅದನ್ನು ಉಳಿಸಲು ಗೋ ಸಂತತಿ ಬೆಳೆಸುವುದು ಅತೀ ಅಗತ್ಯ” ಎಂದು ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ ನ ಅಧ್ಯಕ್ಷರಾದ ಭಕ್ತಿಭೂಷನ್ ದಾಸ್ ಹೇಳಿದ್ದಾರೆ.

ಮಾ.15ರಂದು ಸುಳ್ಯಕ್ಕೆ ಆಗಮಿಸಿದ ನಂದಿ ರಥಯಾತ್ರೆಗೆ ಸುಳ್ಯ ಚೆನ್ನಕೇಶವ ದೇವಸ್ಥಾನ ಮುಂಭಾಗ ನಂದಿ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು‌ ಮಾತನಾಡಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಗೋವಿನಿಂದ ಬರಡು ಭೂಮಿಯೂ ಸಂಪದ್ಭರಿತವಾಗುವುದು ಎಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷರಾದ ಅಕ್ಷಯ್ ಕೆ.ಸಿ.ಯವರು ಮಾತನಾಡಿದರು.‌ ಇದೇ ವೇಳೆ ಅಕ್ಷಯ್ ಆಳ್ವರವರು ಅಕ್ಷಯ್ ಕೆ.ಸಿ. ಯವರಿಗೆ ಮಲೆನಾಡು ಗಿಡ್ಡ ತಳಿಯ ಒಂದು ಗಂಡು ಹಾಗೂ ಹೆಣ್ಣು ಕರುಗಳನ್ನು ಕೊಡುಗೆಯಾಗಿ ನೀಡಿದರು. ಕರುಗಳನ್ನು ಸ್ವೀಕರಿದ ಅಕ್ಷಯ್ ಕೆ.ಸಿ.ಯವರು ಕೆ.ವಿ.ಜಿ. ಆಯುರ್ವೇದ ಕ್ಯಾಂಪಸ್ ನಲ್ಲಿ ಸಾಕುವುದಾಗಿ ತಿಳಿಸಿದರು.

ಶಾಸಕಿ‌ ಭಾಗೀರಥಿ ಮುರುಳ್ಯ, ಸುಳ್ಯ‌ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲ ನೀರಬಿದಿರೆ, ಮಾಜಿ ಸಚಿವ ಎಸ್.ಅಂಗಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಪಶುವೈದ್ಯರುಗಳಾದ ಡಾ. ಸೂರ್ಯನಾರಾಯಣ ಭಟ್, ಡಾ. ಕೇಶವ ಸುಳ್ಳಿ, ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಉದ್ಯಮಿ ಸುಧಾಕರ ಕಾಮತ್, ನಂದಿ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಅಕ್ಷಯ್‌ ಕೆ.ಸಿ., ಕಾರ್ಯಾಧ್ಯಕ್ಷ ಪತಂಜಲಿ ಭಾರದ್ವಾಜ್, ಕೋಶಾಧಿಕಾರಿ ಸನತ್ ಪಿ.ಆರ್. ವೇದಿಕೆಯಲ್ಲಿ ಇದ್ದರು.

ಗಾಯಕರಾದ ಸುಮಾ ಕೆ.ಎಸ್., ಹರ್ಷಿತ್ ಮರ್ಕಂಜ ವೈಯಕ್ತಿಕ ಗೀತೆ ಹಾಡಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಕಂಚಿ ಕಾಮಕೋಟಿ ಆಶ್ರಮದವರಿಂದ ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು.

ಸ್ವಾಗತ ಸಮಿತಿ ಸಂಚಾಲಕ ರಾಜೇಶ್ ಮೇನಾಲ ಸ್ವಾಗತಿಸಿದರು. ಉಪಾಧ್ಯಕ್ಷ ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಡಿ.ಪಿ. ವಂದಿಸಿದರು.

ನಂದಿರಥಯಾತ್ರೆ ದೇವಸ್ಥಾನದ ಮುಂಭಾಗ ತಲುಪಿದಾಗ ಎಲ್ಲರಿಗೂ ಬೆಲ್ಲ – ನೀರು, ಮಜ್ಜಿಗೆ ವಿತರಣೆ ನಡೆಯಿತು. ಸಭೆ ಮುಗಿದ ಬಳಿಕ ಪಲಾವು, ಕಷಾಯ ವಿತರಣೆ ನಡೆಯಿತು.