ಕಲ್ಲುಗುಂಡಿ ಶ್ರೀಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲದ ಪೂರ್ವಭಾವಿ ಸಭೆ

0

ದ.ಕ. ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲವು ಮಾ. 28ರಿಂದ 30ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಒತ್ತೆಕೋಲ ದೈವದ ಸಮ್ಮಾನಗಳ ಹಾಗೂ ಜವಾಬ್ದಾರಿಗಳ ಪೂರ್ವಭಾವಿ ಸಭೆಯು ಮಾ.15ರಂದು ಒತ್ತೆಕೋಲ ಗದ್ದೆಯ ಕಛೇರಿಯಲ್ಲಿ ಜರುಗಿತು.

ಒತ್ತೆಕೋಲ ಉತ್ಸವ ಸಮಿತಿಯ ಅಧ್ಯಕ್ಷ ಕೆ. ಆರ್ ಜಗದೀಶ್ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಕೆ. ವಿ ಮಂಜುನಾಥ್ ಒತ್ತೆಕೋಲದ ಪೂರ್ವಭಾವಿ ಕೆಲಸಗಳ ಜವಾಬ್ದಾರಿಗಳ ಬಗ್ಗೆ ಪ್ರಸ್ತಾವನೆ ವಾಚಿಸಿದರು. ಬಳಿಕ ಊರಿನ ಗ್ರಾಮಸ್ಥರಿಂದ ಸೂಕ್ತ ಸಲಹೆ – ಸೂಚನೆಗಳನ್ನು ಸಭೆಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಕೋಶಾಧಿಕಾರಿ ಬಿ.ಆರ್. ಪದ್ಮಯ್ಯ, ವಿ. ವಿ ಬಾಲನ್, ಸಂಪಾಜೆ ವಲಯ ತೀಯ ಸಮಾಜದ ಅಧ್ಯಕ್ಷ ಶ್ರೀಧರ ಕೆ.ಕೆ , ಕೆ . ವಿ ಉದಯ ಶಂಕರ ಕುಕ್ಕೇಟಿ , ಸುರೇಶ್ ಕದಿಕಡ್ಕ , ರಾಮಕೃಷ್ಣ ಭಜನ ಮoದಿರದ ಅಧ್ಯಕ್ಷ ರಾಜಗೋಪಾಲ ಉಳುವಾರು, ಶ್ರೀಧರ ದುಗ್ಗಳ, ಯಮುನಾ ಬಿ.ಎಸ್, ಕಿಶೋರ್ ಕುಮಾರ್ ಕೆ. ಅಡ್ಕಾರು ,ಕೇಶವ ಬಂಗ್ಲೆಗುಡ್ಡೆ , ಪ್ರಶಾಂತ್ ಇ. ವಿ, ನಾಗೇಶ್ ಪೇರಾಲು, ಸಂಜೀವ ಪೂಜಾರಿ ಕೀಲಾರು, ಕೂಸಪ್ಪ ಬೊಳುಗಲ್ಲು , ಲಲನ ಕೆ. ಆರ್ , ಕಾಂತಿ ಬಿ.ಎಸ್, ಕಿಶೋರ್ ಬಿ.ಎಸ್ , ವಿನಯ ದುಗ್ಗಳ, ಸಿ. ಕೆ ಗಂಗಾಧರ ಚಟ್ಟ್ ಕಲ್ಲು, ಶರತ್ ಕೀಲಾರು, ಅತೀಶ್ ಪೇರಾಲು, ಪ್ರಕಾಶ್ ರೈ , ವಿಶ್ವನಾಥ್ ಮೇಲಾಂಟ, ಸದಾನಂದ ರೈ , ಈಶ್ವರ ಆಚಾರ್ಯ, ಯು.ಡಿ ಕೃಷ್ಣಪ್ಪ ಬಾಚಿಗದ್ದೆ , ಪುಟ್ಟಣ್ಣ, ಯತೀಶ್ ಸುದ್ದಿ ವರದಿಗಾರ ಕೃಷ್ಣ ಬೆಟ್ಟ ಸೇರಿದಂತೆ ಸಮಿತಿಯ ಪದಾಧಿಕಾರಿಗಳು , ಊರಿನ ಭಕ್ತಾಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಿಶೋರ್.ಬಿ.ಎಸ್ ಸರ್ವರನ್ನು ಸ್ವಾಗತಿಸಿ , ಮಹಾವಿಷ್ಣು ಮೂರ್ತಿ ದೈವಸ್ಥಾನದ ಅಧ್ಯಕ್ಷ ಕೆ.ಆರ್ ಜಗದೀಶ್ ರೈ ವಂದಿಸಿದರು.