ಬಾಹ್ಯಾಕಾಶದಿಂದ ಭೂಮಿಗಿಳಿದ ಸಾಹಸಿ ಮಹಿಳೆ ಸುನೀತಾ ವಿಲಿಯಮ್ಸ್ ರವರ ಆರೋಗ್ಯ ವೃದ್ಧಿಗೆ ಪ್ರಾರ್ಥನೆ

ಮಹಿಳಾ ಸಮಾಜ (ರಿ.)ಸುಳ್ಯ , ಪಯಸ್ವಿನಿ ಯುವತಿ ಮಂಡಲ (ರಿ.) ಸುಳ್ಯ , ಎಂಬಿ ಪೌಂಡೇಶನ್ (ರಿ) ಸುಳ್ಯ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮಾ.19 ರಂದು ಮಹಿಳಾ ಸಮಾಜ ಸುಳ್ಯ ಇಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪುಷ್ಪಾರಾಧಕೃಷ್ಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಿ ಡಿ ಪಿ ಓ ಕಚೇರಿಯ ಮೇಲ್ವಿಚಾರಕಿ ರವಿಶ್ರೀ ಉಪಸ್ಥಿತರಿದ್ದರು.

ಉದ್ಘಾಟನೆಯನ್ನು ತಾ.ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೊರು ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸೈಕಾಲಜಿಸ್ಟ್ ಮತ್ತು ಕೌನ್ಸಿಲರ್ ಶ್ರೀ ಸಾಯಿ ಕ್ಲಿನಿಕ್, ಮನಸ್ತ ನ್ಯೂರೊಸೈಕಾಲಜಿಕಲ್ ಟ್ರಿಟ್‌ಮೆಂಟ್ & ಕೌನ್ಸಿಲಿಂಗ್ ಸೆಂಟರ್ ಸುಳ್ಯ ಇಲ್ಲಿಯ ವೈದ್ಯರಾದ ಡಾ.ಹಸ್ತ ಬಿ.ಆಗಮಿಸಿ ಮಾನಸಿಕ ಅರೋಗ್ಯದ ಕುರಿತು ಸೂಕ್ತ ಮಾಹಿತಿ ನೀಡಿದರು.
ಇದರೊಂದಿಗೆ ಮಹಿಳಾ ಸಮಾಜದಲ್ಲಿ ಭಜನಾ ತರಬೇತಿ ನೀಡುತ್ತಿರುವ ಶ್ರೀಮತಿ ಸವಿತಾ ಸಂದೇಶ್‌ರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಹಾಗೂ 9 ತಿಂಗಳ ಬಳಿಕ ಬಾಹ್ಯಾಕಾಶದಿಂದ ಭೂಮಿಗೆ ಇಳಿದ ಸಾಹಸಿ ಸುನೀತಾ ವಿಲಿಯಮ್ಸ್ ರ ವರ ಆರೋಗ್ಯ ವೃದ್ಧಿಗೆ ಪ್ರಾರ್ಥಿಸಲಾಯಿತು. ಹಾಗೂ ಮಹಿಳೆಯರಿಗೆ ಮನೋರಂಜನ ಆಟವನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು.
ಮಹಿಳಾ ಸಮಾಜದ ಗೌರವಾಧ್ಯಕ್ಷೆ ಹರಣಿ ಸದಾಶಿವ , ಸ್ಥಾಪಕಾಧ್ಯಕ್ಷೆ ನೇತ್ರಾವತಿ ಪಡ್ಡಂಬೈಲು ಮಾತಾನಾಡಿದರು.
ರಾಧಾಮಣಿ ಕಾರ್ಯಕ್ರಮ ನಿರೂಪಿಸಿ, ಶಾರಾದ ಶೇಟ್ ಪ್ರಾರ್ಥಿಸಿ, ಕಾರ್ಯದರ್ಶಿ ಹೇಮಾ ಗಿರೀಶ್ ಸ್ವಾಗತಿಸಿ , ಉಪಾಧ್ಯಕ್ಷೆ ಸುಧಾ ಶ್ರೀಧರ್ ವಂದಿಸಿದರು.