ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಕಮಿಟಿ ವತಿಯಿಂದ ಸನ್ಮಾನ
ಮಾ.31 ರಂದು ನಿವೃತ್ತಿ ಹೊಂದಲಿರುವ ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ| ನಂದಕುಮಾರ್ ಬಾಳಿಕಳರವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಮಾ.೨೦ ರಂದು ಡಾ.ನಂದಕುಮಾರ್‌ರು ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಡಾ.ರೇಣುಕಾ ಪ್ರಸಾದ್ ಕೆ.ವಿ. ಹಾಗೂ ಡಾ. ಜ್ಯೋತಿಆರ್ ಪ್ರಸಾದ್ ನೇತೃತ್ವದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಕಮಿಟಿ `ಬಿ’ ಇದರ ವತಿಯಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್‌ಯು.ಜೆ.ಯವರು ಡಾ| ನಂದಕುಮಾರ್ ಬಾಳಿಕಳ ದಂಪತಿಯನ್ನು ಸನ್ಮಾನಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾಧವ ಬಿ.ಟಿ. ಮತ್ತು ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು.