ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮಾವಿನಕಟ್ಟೆ ಉದಯಗಿರಿಯ ಶ್ರೀ ಮಹಾವಿಷ್ಣು ಮೂರ್ತಿ ದೈವದ ಕನ್ನಡಭಕ್ತಿಗೀತೆ ” ಶ್ರೀ ವಿಷ್ಣು ಮೂರ್ತಿಯೇ” ಮಾರ್ಚ್ 18 ರಂದು ಬಿಡುಗಡೆಗೊಂಡಿತು.
ಶ್ರೀ ಕ್ಷೇತ್ರದಲ್ಲಿ ನಡೆದ ಒತ್ತೆಕೋಲ ಮಹೋತ್ಸವದ ಸಂದರ್ಭದಲ್ಲಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಕೆ.ಆರ್. ಶ್ರೀ ಕಟೀಲ್ ಭಕ್ತಿಗೀತೆಯನ್ನು ಬಿಡುಗಡೆಗೊಳಿಸಿದರು. ವೆಂಕಟ್ ವಳಲಂಬೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೈವಸ್ಥಾನ ಸಮಿತಿಯ ಸದಸ್ಯರು ಹಾಗೂ ಯುವ ಗಾಯಕಿ ಅಂಕಿತಾ ಆಚಾರ್ಯ ಕಡ್ಲಾರು , ಸಾಹಿತ್ಯ ನಿರ್ವಹಣೆ ಮಾಡಿದ ನಿರಂಜನ್ ಕಡ್ಲಾರು ಉಪಸ್ಥಿತರಿದ್ದರು.
ನಿರಂಜನ್ ಕಡ್ಲಾರುರವರ ಸಾಹಿತ್ಯ ನಿರ್ವಹಣೆಯಲ್ಲಿ ಕಾವ್ಯ ಗಣೇಶ್ ಸುಳ್ಯ ಇವರ ಸುಮಧುರ ಗಾಯನವಿದೆ. ಶರತ್ ಬಿಳಿನೆಲೆಯವರ ಸಂಗೀತ, ಮೋಕ್ಷಿತ್ ಗೌಡ ಅವರ ಸಂಕಲನ, ವಿಥುನ್ ರಾಜ್ ವಿದ್ಯಾಪುರರವರ ಸ್ಟುಡಿಯೋ ಚಿತ್ರೀಕರಣ ಹಾಗೂ ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಇದೆ . ಸುದ್ದಿಚಾನೆಲ್ ಸುಳ್ಯ ಇವರ ವಿಡಿಯೋ ಕೃಪೆ ಈ ಭಕ್ತಿಗೀತೆಗೆ ಇದೆ.