ಧನಲಕ್ಷ್ಮಿ ಮಹಿಳಾ ಮಂಡಲ ಅಜ್ಜಾವರ ಮತ್ತು ನಿವೇದಿತ ಸಂಚಾಲನ ಸಮಿತಿ ಅಜ್ಜಾವರ ಇದರ ವತಿಯಿಂದ ಮಾ.20ರಂದು ಅಜ್ಜಾವರದ ವೇದ ಪಾಠಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ನಡೆಯಿತು.

ಉದ್ಘಾಟನೆಯನ್ನು ಭಾಸ್ಕರ್ ಬಯಂಬು ಇವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಮೀಳಾ.ಟಿ (ಆರೋಗ್ಯ ಶಿಕ್ಷಣಾಧಿಕಾರಿ ತಾಲೂಕು ಆರೋಗ್ಯ ಇಲಾಖೆ ಸುಳ್ಯ) ಇವರು ಮಹಿಳೆಯರ ಆರೋಗ್ಯದ ಬಗ್ಗೆ ಮಹಿಳಾ ದಿನಾಚರಣೆ ಬಗ್ಗೆ ತಿಳಿಸಿದರು. ಧನಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷರು ಮತ್ತು ನಿವೇದಿತ ಸಂಚಾಲನ ಸಮಿತಿ ಸಂಚಾಲಕರಾದ ಕವಿತಾ ಪುರುಷೋತ್ತಮ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರಾದ ವೇದಾವತಿ ಬಾಲಚಂದ್ರ, ಚೈತ್ರ ಯುವತಿಮಂಡಲದ ಅಧ್ಯಕ್ಷರಾದ ಶಶ್ಮಿ ಭಟ್ ಅಜ್ಜಾವರ ಇದ್ದರು.
ಮನೋರಮ ಪ್ರಾರ್ಥಿಸಿದರು. ಜಯಶ್ರೀ ನಾಗೇಶ್ ಸ್ವಾಗತಿಸಿದರು. ಸರಸ್ವತಿ ಚಂದ್ರಶೇಖರ ವಂದಿಸಿದರು. ವಿಮಲ ಅರುಣ ಕಾರ್ಯಕ್ರಮ ನಿರೂಪಿಸಿದರು. ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾಮಂಡಲದ ಪದಾಧಿಕಾರಿಗಳು, ಸದಸ್ಯರು ಮತ್ತು ನಿವೇದಿತ ಸಂಚಾಲನ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.