ಕೋಟೆಮುಂಡುಗಾರಿನ ಶರವಣಭವ ಸಿಂಗಾರಿ ಮೇಳದ ಸದಸ್ಯರು ಅಮರಪಡ್ನೂರು ಗ್ರಾಮದ ಹೊನ್ನೆಕಡ್ಪು ಸೀತಮ್ಮ ಕುಟುಂಬಕ್ಕೆ ರೂ. 20 ಸಾವಿರ ಧನಸಹಾಯವನ್ನು ಹಸ್ತಾಂತರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವರ ಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ರಥಬೀದಿಯಲ್ಲಿ ಚೆಂಡೆವಾದನ ನಡೆಸುವ ಮೂಲಕ ಧನ ಸಂಗ್ರಹಿಸಿ ರೂ. 20 ಸಾವಿರವನ್ನು ಸೀತಮ್ಮರಿಗೆ ಮನೆ ನಿರ್ಮಾಣಕ್ಕೆ ನೀಡಿದರು. ತಂಡದ ಮಾರ್ಗದರ್ಶಕರಾದ ಪವನ್ ಕುಮಾರ್ ಶುಭಾಶಯ ಹೇಳಿದರು. ಸುದ್ದಿ ಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಸುಳ್ಯ ಸೈಂಟ್ ಬ್ರಿಜಿಡ್ಸ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಕುರುಂಬುಡೇಲು, ಬೆಳ್ಳಾರೆ ಗೌರಿಪುರಂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯ ತೀರ್ಥರಾಮ ಗೌಡ ಗುಡ್ಡೆಮನೆ, ಆಲೆಟ್ಟಿ ಮರಾಟಿ ಯುವ ವೇದಿಕೆಯ ಅಧ್ಯಕ್ಷ ಆನಂದ ಆಲೆಟ್ಟಿ, ಸ್ಥಳೀಯರಾದ ನಿವೃತ್ತ ಪೊಲೀಸ್ ಅಧಿಕಾರಿ ಕೇಶವ ಪರಿವಾರ, ಸೀತಮ್ಮರ ಮಕ್ಕಳಾದ ಕು. ಚಿತ್ರಾವತಿ, ಕು. ಹರಿಣಿ, ಸಿಂಗಾರಿ ಮೇಳದ ಸದಸ್ಯರು ಉಪಸ್ಥಿತರಿದ್ದರು.
ತಂಡದಲ್ಲಿ ಮಾರ್ಗದರ್ಶಕರಾಗಿ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕರಾದ ಪವನ್ ಕುಮಾರ್, ಸಿಂಗಾರಿ ಮೇಳದ ಮುಖ್ಯಸ್ಥರಾದ ಧನುಷ್ ಮುಂಡುಗಾರು, ಸದಸ್ಯರಾದ ತನ್ವಿತ್ ಎನ್. ಬೆಳ್ಳಾರೆ, ಮೋನಿಶ್ ಬೆಟ್ಟಂಪಾಡಿ, ಅಂಕಿತ್ ಬೆಟ್ಟಂಪಾಡಿ, ಮನೋಜ್ ಕುಮಾರ್, ರಕ್ಷಿತ್ ಬಾಳಿಲ, ಪ್ರಜ್ಬಲ್ ಬೊಳಿಯೂರು, ಚೇತನ್ ಮುಗುಪ್ಪು, ಚೇತನ್ ಬಳ್ಪ, ರೋಹಿತ್ ಅಡ್ಕಾರ್, ಮನಿಶ್ ಅಡ್ಕಾರ್, ತಿಲೇಶ್ ಬೆಟ್ಟಂಪಾಡಿ, ಧನುಷ್ ಆಚಾರ್, ಆದರ್ಶ ಶಂಕರ ಬೆಳ್ಳಾರೆ, ಕೌಶಿಕ್ ಮಾಪಲಗುಂಡಿ, ಆಶ್ಲೇಷ ಕಳಂಜ, ಜಿತೇಶ್ ಕಳಂಜ, ಗಗನ್ ಕಳಂಜ, ಚಿಂತನ್ ಭಂಡಾರಿ ಪುನ್ಚತ್ತಾರು, ಚಿಂತನ್ ಪುತ್ತೂರು, ರಕ್ಷಿತ್ ಕಳಂಜ, ನಿತಿನ್ ಕಿಲಂಗೋಡಿ, ಲೋಹಿತ್ ಶೇಣಿ, ಯತಿನ್ ಕಿಲಂಗೋಡಿ, ಜ್ಞಾನೇಶ್ ಕಾಯಾರ, ಜ್ಞಾನೇಶ್ ಕಾರ್ಜ, ಪ್ರೀತೇಶ್ ಎಲಿಮಲೆ, ತಾತ್ವಿಕ್ ಅಡ್ಕಾರ್, ದರ್ಶನ್ ಕಾರ್ಜ, ಮಲ್ತೇಶ್ ಕರಿಕ್ಕಳ, ವಸಂತ ಮುಪ್ಪೇರ್ಯ, ಪ್ರವೀಣ ಬಾಳಿಲ, ಲಿಖಿತ ಕಲ್ಮಡ್ಕ, ಪೂರ್ಣಿಮಾ ಮಾಪಲಗುಂಡಿ, ರೇಷ್ಮಾ ಮಾಪಲಗುಂಡಿ, ಸೌಮ್ಯ ಮೋಟುಕಾನ, ಪ್ರಮೀಳಾ ನೆಟ್ಟಾರು, ರಕ್ಷಾ ಕಲ್ಮಡ್ಕ, ಮಿಥುನಾಕ್ಷಿ ಇದುಂಗುಳಿ, ಸಂಧ್ಯಾ ಬಾಳಿಲ, ನಿತಿನ್ ಎಂ. ಕಲ್ಮಡ್ಕ, ಮೋಕ್ಷಿತ್ ಪರಪ್ಪ ಸಹಕರಿಸಿದರು.