ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಆದಿ ದ್ರಾವಿಡ ಜನಾಂಗವನ್ನು ಪರಿಗಣಿಸಿ

0

ಎಸ್.ಸಿ.ಗೂ ಅವಕಾಶ ಕೊಡಿ, 37 ವರ್ಷದಿಂದ ಕಾಂಗ್ರೆಸ್ ನಲ್ಲಿದ್ದೇನೆ

ನಂಗೂ ಒಂದು ಅವಕಾಶ ಕೊಡಿ : ಲಕ್ಷ್ಮೀ ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಎಸ್. ಸಿ ಗೂ ಅವಕಾಶ ನೀಡಿ, ನಮ್ಮ ಆದಿ ದ್ರಾವಿಡ ಜನಾಂಗವನ್ನು ವಿಶೇಷವಾಗಿ ಪರಿಗಣಿಸಿ . 37 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಂಗೂ ಒಂದು ಅವಕಾಶ ಕೊಡಿ, ಲಾಭಿ ನಡೆಸಲು, ಬೆಂಗಳೂರಿಗೆ ಹೋಗಲು ನನ್ನ ಬಳಿ ಹಣ ಇಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತೆ ಲಕ್ಷ್ಮೀ ಸುಬ್ರಹ್ಮಣ್ಯ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನ ಸುಳ್ಯ ತಾಲೂಕು ಬ್ಲಾಕ್ ನ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ಸಿ ಘಟಕದ ಅಧ್ಯಕ್ಷಳಾಗಿ, ಗ್ರಾ.ಪಂ ಸದಸ್ಯಳಾಗಿ ಕೆಲಸ ಮಾಡಿದ್ದೇನೆ. ಈ ಭಾರಿ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತನ ಕೊಡಿಸುವುದಾಗಿ ಮಾಜಿ ಸಚಿವ ರಮಾನಾಥ ರೈ ಭರವಸೆ ನೀಡಿದ್ದರು. ಹೆಚ್ಚಿನ ಎಲ್ಲಾ ಸರ್ಕಾರಿ ಸಮಿತಿಗಳಲ್ಲಿ ಎಸ್ ಟಿ ಹಾಗೂ ಎಸ್.ಸಿ ಗೆ ಅವಕಾಶ ಇದೆ. ಅದೇ ರೀತಿ ವ್ಯವಸ್ಥಾಪನಾ ಸಮಿತಿಯಲ್ಲೂ ಎರಡಕ್ಕೂ ಅವಕಾಶ ಕೊಡಿ. ನಮ್ಮ ಸುಬ್ರಹ್ಮಣ್ಯದಲ್ಲಿ ನಮ್ಮವರದ್ದು 48 ಮನೆಗಳುವೆ ನಮಗೂ ಅವಕಾಶ ಕಲ್ಪಿಸಿ ಈ ಭಾರಿಯಾದರೂ ವ್ಯವಸ್ಥಾಪನಾ ಸಮಿತಿಯಲ್ಲಿ ನಂಗೊಂದು ಅವಕಾಶ ಕೊಡಿಸಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.