
ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ-2025 ದಿನಾಂಕ 23-03-2025 ರಂದು ದೇವಮ್ಮ ಕಾಂಪ್ಲೆಕ್ಸ್ ಸುಳ್ಯ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಇವರು ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2025 ನೇ ಸಾಲಿನ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ಯನ್ನು ಯುವ ಸಾಹಿತಿ
ಪ್ರಿಯಾ ಸುಳ್ಯ ರವರಿಗೆ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.ಇವರು, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಸೇವೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಚಿಗುರೆಲೆ ಸಾಹಿತ್ಯ ಬಳಗ ಇದರ ಸದಸ್ಯರಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. ಸಮಾರಂಭ ಕಾರ್ಯಕ್ರಮದಲ್ಲಿ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಸುಳ್ಯ , ಹಿರಿಯ ಸಾಹಿತಿ ಶ್ರೀ ಶ್ರೀ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿ, ಹಿರಿಯ ಸಾಹಿತಿ ನಾರಾಯಣ ಕುಕ್ಕುವಳ್ಳಿ, ಮೋಹನ್ ನಂಗಾರು, ಚೆನ್ನಕೇಶವ ಜಾಲ್ಸೂರು ,
ಪಿ ವೆಂಕಟೇಶ್ ಬಾಗವಾಡ ಹಾಗೂ ನವೀನ್ ಚಾತುಬಾಯಿ ಉಪಸ್ಥಿತರಿದ್ದರು.