ಅಜ್ಜಾವರದ ಇರಂತಮಜಲು ಎಂಬಲ್ಲಿ ಸ್ಕೂಟಿಗೆ ರಿಕ್ಷಾ ಢಿಕ್ಕಿಯಾದ ಪರಿಣಾಮ ಸವಾರರಿಬ್ಬರೂ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಅಜ್ಜಾವರದ ತುದಿಯಡ್ಕದಲ್ಲಿ ಕಾರ್ಯಕ್ರಮ ಮುಗಿಸಿ, ಕಾಸರಗೋಡಿನ ಮಲ್ಲಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಜನಾರ್ದನಾ – ಉಷಾ ದಂಪತಿಗಳ ಸ್ಕೂಟಿಗೆ, ಸುಳ್ಯದ ಕಡೆ ಬರುತ್ತಿದ್ದ ಪೇರಾಲಿನ ಹರಿಪ್ರಸಾದ್ ಎಂಬವರ ರಿಕ್ಷಾ ಢಿಕ್ಕಿಯಾಯಿತು.
ಈ ಅಪಘಾತದಿಂದ ರಿಕ್ಷಾ ಪಲ್ಟಿಯಾದರೆ, ಸ್ಕೂಟಿಯಲ್ಲಿದ್ದ ದಂಪತಿಗಳು ರಸ್ತೆಯ ಬದಿಗೆ ಎಸೆಯಲ್ಪಟ್ಟರು.
ಜನಾರ್ದನ ರ ಕೈಗೆ ಹಾಗೂ ಉಷಾರವರ ಕಾಲಿಗೆ ಗಾಯವಾಗಿದೆ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಹೃತಿಕ್ ಎಂಬವರಿಗೂ ಗಾಯವಾಗಿದೆ.
ಅಪಘಾತ ನಡೆದ ಸ್ಥಳದ ಪಕ್ಕದ ಮನೆಯವರಾದ ಅಜ್ಜಾವರ ಗ್ರಾ.ಪಂ ಸದಸ್ಯ ಪ್ರಸಾದ್ ರೈ ಮೇನಾಲ ಹಾಗೂ ಅವರ ಕೆಲಸದವರು ಮತ್ತು ಸುಳ್ಯದಿಂದ ಅಜ್ಜಾವರಕ್ಕೆ ಹೋಗುತ್ತಿದ್ದ ವಿನಯ್ ಶಿರಾಜೆಯವರು ಗಾಯಾಳುಗಳನ್ನು ಮೇಲೆತ್ತಿ, ಪ್ರಸಾದ್ ರೈಗಳಜೀಪಿನಲ್ಲಿ ಹಾಕಿ ಸುಳ್ಯ