ದ.ಕ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರಿಗೆ ಮಾ.24 ರಂದು ಸನ್ಮಾನ ಮಾಡಲಾಯಿತು.

ಇತ್ತೀಚಿಗೆ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಹಿನ್ನಲೆ ಗ್ರಾಮ ಪಂಚಾಯತ್ ವತಿಯಿಂದ ಸದಸ್ಯರಾದ ಜಗದೀಶ್ ರೈ ಶಾಲು ಹೊದಿಸಿ ಸನ್ಮಾನಿಸಿದರು. ಗ್ರಾಂ.ಪಂ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಅಧ್ಯಕ್ಷತೆ ವಹಿಸಿ ಶುಭ ಹಾರೈಕೆ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ ಉಪಾಧ್ಯಕ್ಷರಾದ ಎಸ್. ಕೆ.ಹನೀಫ್ ಮಾಜಿ ಅಧ್ಯಕ್ಷರಾದ ಜಿ. ಕೆ.ಹಮೀದ್ ಗೂನಡ್ಕ , ಶ್ರಿಮತಿ ಸುಂದರಿ ಮುಂಡಡ್ಕ ,ರಜನಿ ಶರತ್,ಅಬೂಶಾಲಿ , ಶೌವಾದ್ ಗೂನಡ್ಕ, ಲಸ್ಸಿ ಮೊನಾಲಿಸಾ , ವಿಮಲ ಪ್ರಸಾದ್ ,ವಿಜಯ ಕುಮಾರ್, ಸುಶೀಲ ಕೈಪಡ್ಕ ಹಾಗೂ ಪಂಚಾಯತ್ ನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.