ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ : ಪ್ರಬಂಧ ಸ್ಫರ್ಧೆ-ಬಹುಮಾನ ವಿತರಣಾ ಕಾರ್‍ಯಕ್ರಮ

0

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಬೆಳೆವಣಿಗೆ ಯಲ್ಲಿ ಶಿವರಾಮ ಕಾರಂತರ ಬರೆಹ ಪಾತ್ರ? ಎಂಬ ವಿಷಯದ ಬಗ್ಗೆ ಪ್ರಥಮ ಬಿ.ಎ ಮತ್ತು ಅಂತಿಮ ಬಿ.ಎ ಐಚ್ಚಿಕ ಕನ್ನಡ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್‍ಯಕ್ರಮವು ಮಾ.೧೪ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗ ಇದರ ಪ್ರಭಾರ ಮುಖ್ಯಸ್ಥರಾದ ಡಾ. ಸೌಮ್ಯ ಹೆಚ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಪ್ರೀತಿ ಕೆ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಯಮನೂರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರಬಂಧದ ವಿಷಯದ ಕುರಿತಾಗಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮಂಜು ಪಿ ವಿಶ್ಲೇಷಣೆ ನಡೆಸಿದರು. ಕನ್ನಡ ವಿಭಾಗದ ಇನ್ನೋರ್ವ ಸಹಾಯಕ ಪ್ರಾಧ್ಯಾಪಕರಾದ ಕಿಶೋರ್ ಕುಮಾರ್ ಬಿ.ಡಿ ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರಗಳನ್ನು ವಾಚಿಸಿದರು. ಕು. ದಿವ್ಯಶ್ರೀ ಅಂತಿಮ ಬಿ.ಎ ಸ್ವಾಗತಿಸಿದರು, ಕುಮಾರಿ ಅರ್ಚನ ಅಂತಿಮ ಬಿ.ಎ ವಂದಿಸಿದರು. ಕುಮಾರಿ ಶ್ರುತಿ ಅಂತಿಮ ಬಿ.ಎ ಕಾರ್‍ಯಕ್ರಮ ನಿರೂಪಿಸಿದರು.