ಪ್ರಥಮ :ರಾಮಕಿಶೋರ್ ಮತ್ತು ಸಂದೀಪ್ ಪಂಜ ತಂಡ
ದ್ವಿತೀಯ: ಚರಣ್ ಮತ್ತು ಸಂತೋಷ ಬೆಳ್ಳಾರೆ ತಂಡ

ಯುವಕ ಮಂಡಲ ಕಳಂಜ ವತಿಯಿಂದ ಸುಳ್ಯ ಮತ್ತು ಕಡಬ ತಾಲೂಕುಗಳ ಸಿ ಗ್ರೇಡ್ ಆಟಗಾರರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಮಾ.22 ರಂದು ನಡೆಯಿತು.
ಆರಂಭದಲ್ಲಿ ನಡೆದ ಉದ್ಘಾಟನೆ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಗಂಗಾಧರ ತೋಟದಮೂಲೆ ವಹಿಸಿದ್ದರು.

ಪಂದ್ಯಾಟವನ್ನು ನಾಗರಿಕ ದೇವತಾರಾಧನಾ ಸಮಿತಿ ಬಾಳಿಲ ಇದರ ಅಧ್ಯಕ್ಷರಾದ ಶೇಷಪ್ಪ ಪರವ ಬಾಳಿಲ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸತೀಶ್ ಕುಮಾರ್ ತಂಟೆಪ್ಪಾಡಿ, ಶರವಣಭವ ಸಿಂಗಾರಿ ಮೇಳ ಕೋಟೆಮುಂಡುಗಾರು ಇದರ ಅಧ್ಯಕ್ಷ ಧನುಷ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷ ಶಿವರಾಮ ಕಜೆಮೂಲೆ, ಕಾರ್ಯದರ್ಶಿ ದಿನೇಶ್ ಪಾಂಡಿಪಾಲು, ಕ್ರೀಡಾ ಕಾರ್ಯದರ್ಶಿ ಚಂದ್ರಶೇಖರ ಕಜೆಮೂಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವಕ ಮಂಡಲಕ್ಕೆ ಇನ್ವರ್ಟರ್ ಕೊಡುಗೆ ಕೊಡಿಸುವಲ್ಲಿ ಪ್ರಮುಖ ವಹಿಸಿದ್ದ ಪವನ್ ಕುಮಾರ್ ಅವರನ್ನು ಗೌರವಿಸಲಾಯಿತು.
ಶಿವರಾಮ ಕಜೆಮೂಲೆ ಸ್ವಾಗತಿಸಿದರೆ, ಜಗದೀಶ್ ಮುಂಡುಗಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪಂದ್ಯಾಟದಲ್ಲಿ ಶರವಣಭವ ಸಿಂಗಾರಿ ಮೇಳ ಕೋಟೆಮುಂಡುಗಾರು ವತಿಯಿಂದ ಚೆಂಡೆ ಬಡಿತ ಪ್ರದರ್ಶನವಿತ್ತು.

ಫಲಿತಾಂಶ
ಪ್ರಥಮ ಸ್ಥಾನವನ್ನು ರಾಮಕಿಶೋರ್ ಮತ್ತು ಸಂದೀಪ್ ಪಂಜ ತಂಡ ಪಡೆದರೆ,
ದ್ವಿತೀಯ ಸ್ಥಾನವನ್ನು ಚರಣ್ ಮತ್ತು ಸಂತೋಷ ಬೆಳ್ಳಾರೆ ತಂಡ ಪಡೆಯಿತು. ತೃತೀಯ ಸ್ಥಾನವನ್ನು ಪ್ರೀತನ್ ಮತ್ತು ಹಿತನ್ ಗೂನಡ್ಕ ತಂಡ ಹಾಗೂ ಚತುರ್ಥ ಸ್ಥಾನವನ್ನು ರಮೇಶ್ ಮತ್ತು ಪ್ರಸಾದ್ ಯುವಕ ಮಂಡಲ ಕಳಂಜ ತಂಡ ಪಡೆಯಿತು.
