ಬಳ್ಪ ಗ್ರಾಮದ ಚೆನ್ನಕೇಶವ ಜೋಗಿಮನೆ ಎಂಬವರು ಮಾ. 11ರಂದು ಕೋಡಿಂಬಳ ಭಾಗಕ್ಕೆ ಸಾರಣೆ ಕೆಲಸಕ್ಕೆಂದು ಹೋದವರು ಕಾಣೆಯಾಗಿರುವುದಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರಿಗೆ ಸುಮಾರು 61 ವರ್ಷ ವಯಸ್ಸಾಗಿದೆ. ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತಿಳಿಸುವಮತೆ ಅಥವಾ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡುವಂತೆ ಪೋಲೀಸರು ವಿನಂತಿಸಿದ್ದಾರೆ. ಚಿತ್ತರಂಜನ್ ಮೊ: 7795625011