ರಂಜಾನ್ 3 ನೇ ಭಾನುವಾರ ವಿಶೇಷ ಉಪನ್ಯಾಸ ನೀಡಿದ ನೌಫಾಲ್ ಹುದವಿ ಕೊಡುವಳ್ಳಿ
ಗಾಂಧಿನಗರ:ತರ್ಬಿಯತು ಲ್ ಇಸ್ಲಾಂ ಜಮಾಅತ್ ಸಮಿತಿ ಇದರ ಅಧೀನದಲ್ಲಿ
ಪವಿತ್ರ ರಮಜಾನ್ 2025 ರ ವಿಶೇಷ ಕಾರ್ಯಕ್ರಮದಲ್ಲಿ 3 ನೇ ಭಾನುವಾರ ಮಾ 23 ರಂದು ಖ್ಯಾತ ವಾಗ್ಮಿ ನೌಫಾಲ್ ಹುದವಿ ಕೊಡುವಳ್ಳಿ ರವರಿಂದ ಉಪನ್ಯಾಸ ನಡೆಯಿತು.
ಮನುಷ್ಯರು ಪರಸ್ಪರ ಸ್ನೇಹ ಮಯ ಜೀವನ ಸಾಗಿಸಲು ಇಸ್ಲಾಂ ಕಲಿಸಿದ ಅರಿವುಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಥಮ ಭಾನುವಾರದಂದು ಹನೀಫ್ ನಿಜಾಮಿ ಮೊಗ್ರಾಲ್,ಹಾಗೂ ಎರಡನೇ ಭಾನುವಾರ ಮುನೀರ್ ಬಾಖವಿ ಪಾಣಕ್ಕಾಡ್ ರವರು ಭಾಗವಹಿಸಿ ಉಪನ್ಯಾಸ ನೀಡಿದ್ದರು.
ರಮಳಾನ್ ತಿಂಗಳ ಆರಂಭ ದಿಂದಲೇ ಮಸೀದಿಯಲ್ಲಿ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿ ದಿನ ಫಜರ್ ನಮಾಝಿನ ಬಳಿಕ ಸ್ವರ್ಗದ ಬಾಗಿಲು (ಹದೀಸ್ ಅಧ್ಯಯನ) 10 ನಿಮಿಷ,
ಖುರ್‌ಆನ್ ಮಾಧುರ್ಯ ಪ್ರತಿದಿನ ತರಾವೀಹ್ ನಮಾಝಿನ ಬಳಿಕ,
ಪ್ರತಿದಿನ ಲುಹರ್ ನಮಾಜ್ ಬಳಿಕ ಕರ್ಮಗಳು,ಮತ್ತು ಮಸ್‌ಅಲಗಳು 5 ನಿಮಿಷ,
ಜಮಾ ಅತ್ ಕಮಿಟಿ ಮತ್ತು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಸಹಬಾಗಿತ್ತದಲ್ಲಿ ಧಾನಿಗಳ ಸಹಕಾರದೊಂದಿಗೆ ಇಫ್ತಾರ್ ಸಂಗಮ,ಪ್ರತೀ ಭಾನುವಾರ ಲುಹರ್ ನಮಾಝಿನ ಬಳಿಕ ವಿವಿಧ ಮೊಹಲ್ಲಾಗಳ ಪ್ರಖ್ಯಾತ ವಿದ್ವಾಂಸರಿಂದ ವಿಶೇಷ ಉಪನ್ಯಾಸ, ಪ್ರತೀ ಶುಕ್ರವಾರ ಜುಮುಅ ನಮಾಝಿನ ಬಳಿಕ ಬೆಳ್ಳಿ ಬೆಳಕು ಪ್ರಚಲಿತ ವಿಧ್ಯಾಮಾನಗಳ ಕುರಿತು ಉಪನ್ಯಾಸ ನಡೆಸಲಾಗುತ್ತಿದೆ.
ಅಲ್ಲದೆ ಮಹಿಳೆಯರಿಗಾಗಿ ಪ್ರತೀ ಶನಿವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಮಹಿಳೆಯರಿಗೆ ಅಧ್ಯಯನ ತರಗತಿಗಳನ್ನು ಆಯೋಜಿಸಲಾಗಿದೆ.
ರಂಝಾನ್ 17 ರಂದು ಅಸರ್ ನಮಾಝಿನ ಬಳಿಕ ಬದರ್ ಸ್ಮರಣೆ ಮೌಲಿದ್ ಪಾರಾಯಣ ದುಆ ಮಜ್ಲಿಸ್ ಹಮ್ಮಿಕೊಳ್ಳಲಾಯಿತು.
ಇಹಿತಿಕಾಫ್ ಜಲ್ವಾ ರಂಝಾನ್ ತಿಂಗಳ ಮೂರನೇ ಹತ್ತು ರಾತ್ರಿಗಳು
ಇಬಾದತ್ ನೈಟ್ 27ನೇ ರಾತ್ರಿ ತಸ್ಟೀಹ್ ನಮಾಝ್, ತಹ್ಲೀಲ್, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಹಾಗೂ ತೌಭ ಮಜ್ಲಿಸ್ ನಾಲ್ಕನೇ ಶುಕ್ರವಾರ ಜುಮ್‌ಆ ನಮಾಝಿನ ಬಳಿಕ ತೌಭ ಮಜ್ಲೀಸ್ ಮತ್ತು ದುಆ ಸಂಗಮ ನಡೆಯಲಿದೆ.
ರಂಜಾನ್ ವಿಶೇಷ ಉಪನ್ಯಾಸದಲ್ಲಿ 4 ನೇ ಭಾನುವಾರ ಖ್ಯಾತ ವಾಗ್ಮಿ ಜಬ್ಬಾರ್ ಸಖಾಫಿ ಪಾತೂರ್ ರವರಿಂದ ಉಪನ್ಯಾಸ ನಡೆಯಲಿದೆ.