ಮೊಗರ್ಪಣೆ :ಹಿದಾಯತಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಎಕ್ಸಲೆನ್ಸ್ ಶೀ ಕ್ಯಾಂಪ್ ಇದರ 2025-26 ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ.
ಈ ಸಂಸ್ಥೆಯಲ್ಲಿ ಮಹಿಳೆಯರಿಗೆ ಪಿ ಯು ಸಿ ಕಲಿಕೆಯೊಂದಿಗೆ ಶರೀಅತ್ ಗೆ ಶಿಕ್ಷಣಕ್ಕೆ ಅವಕಾಶವಿದ್ದು, ಹಾದಿಯ ಡಿಪ್ಲೋಮಾ ಕೋರ್ಸ್,ಉಮೆನ್ಸ್ ಟೀಚರ್ಸ್ ಕೋರ್ಸ್,ಮುಂತಾದ ಭವಿಷ್ಯ ನಿರೂಪಣೆಯ ಕೋರ್ಸ್ ಲಭ್ಯವಿದೆ.
ಖುರ್‌ಆನ್,ತಪ್ಸೀರ್,ಹದೀಸ್,ಫಿಖ್ಹ್,ತಸವ್ವುಫ್
ಮುಂತಾದ ಶರೀಅತ್ ತರಗತಿಗಳು,ನುರಿತ ವಿದ್ವಾಂಸರಿಂದ ತರಗತಿ,ಇಸ್ಲಾಮಿಕ್ ಚೌಕಟ್ಟಿನೊಳಗೆ ಬೋಧನೆ,
ವ್ಯಕ್ತಿತ್ವ ವಿಕಸನ ತರಗತಿಗಳು ಇಲ್ಲಿಯ ಪ್ರಾಮುಖ್ಯತೆ ಆಗಿದ್ದು ಈ ಸಂಸ್ಥೆಯಲ್ಲಿ ವಿವಾಹಿತ ಮಹಿಳೆಯರಿಗೂ ಶರೀಅತ್ ಕಲಿಯಲು ಅವಕಾಶವಿರುತ್ತದೆ. ಶರೀಯಾ ಕಲಿಕೆಯೊಂದಿಗೆ +1 ಮತ್ತು +2,ಸ್ಪೋಕನ್ ಇಂಗ್ಲೀಷ್ ತರಗತಿಗಳು ಲಭ್ಯವಿದ್ದು ಆಸಕ್ತರು 25-26 ನೇ ಸಾಲಿನ ದಾಖಲಾತಿಗಾಗಿ ಸಂಸ್ಥೆಯನ್ನು ಸಂಪರ್ಕಿಸುವಂತೆ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.