ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಗೊಳ್ಳುತ್ತಿದ್ದು, ಆ ಪ್ರಯುಕ್ತ ಉಭಯ ಗ್ರಾಮಗಳಿಂದ ನಿತ್ಯ ನಿಧಿ ಸಂಗ್ರಹಣೆ ಮಾಡಲಾಗುತ್ತಿದ್ದು, ನಿತ್ಯ ನಿಧಿ ಸಂಗ್ರಹಣೆಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೀರ್ಣೋದ್ದಾರದ ವಾರ್ಷಿಕ ಲೆಕ್ಕಪತ್ರ ಮಂಡನೆ ಮತ್ತು ಸಮಾಲೋಚನಾ ಸಭೆಯು ಇಂದು (ಮಾ. 20) ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಈಗಾಗಲೇ ನಡೆದ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದ ಅವರು “ಗರ್ಭಗುಡಿ ಪೂರ್ಣಗೊಂಡ ನಂತರ ನಮಸ್ಕಾರ ಮಂಟಪದ ಕೆಲಸ ನಡೆದು ಬಳಿಕ ತಾಮ್ರದ ಹೊದಿಕೆ ಮಾಡುವ ಕಾರ್ಯ ನಡೆಯಲಿದೆ. ಬಳಿಕ ಸುತ್ತು ಗೋಪುರದ ಕೆಲಸ ನಡೆಯಲಿದೆ ಎಂದು ವಿವರಿಸಿ ಮುಂದೆಯೂ ಎಲ್ಲರ ಸಹಕಾರ ಕೋರುತ್ತಿದ್ದೇನೆ ಎಂದರು.

ವೇದಿಕೆಯಲ್ಲಿ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗನ್ನಾಥ ಕಾಯರ, ನಿಕಟಪೂರ್ವಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಅನ್ನಪೂರ್ಣ ಸಮಿತಿ ಅಧ್ಯಕ್ಷ ದಯಾನಂದ ಪುರ, ಸೇವಾ ಸಮಿತಿ ಅಧ್ಯಕ್ಷ ಕಮಲಾಕ್ಷ ಪುರ, ಭಜನಾ ಮಂಡಳಿ ಅಧ್ಯಕ್ಷ ನವೀನ್ ಅಳವುಪಾರೆ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಹೇಶ್ ಪುರ ಲೆಕ್ಕಪತ್ರ ಮಂಡಿಸಿದರು.
ಗೋವಿಂದ ಅಳವುಪಾರೆ ಕಾರ್ಯಕ್ರಮ ನೀರೂಪಿಸಿದರು.
ಸಭೆಯಲ್ಲಿ ಪ್ರಮುಖರಾದ ಅಮೃತ ಕುಮಾರ್ ರೈ, ಜಗನ್ಮೋಹನ ರೈ ರೆಂಜಾಳ, ಸತೀಶ್ ರಾವ್ ದಾಸರಾಬೈಲು, ಮೋನಪ್ಪ ಪೂಜಾರಿ ಹೈದಂಗೂರು, ಮಹಾಬಲ ಕಟ್ಟಕ್ಕೋಡಿ, ಪ್ರಶಾಂತ್ ರೈ ಪಾರೆಪ್ಪಾಡಿ, ಗಣೇಶ್ ರೈ ಪಾರೆಪ್ಪಾಡಿ, ದಾಮೋದರ ಕೊಚ್ಚಿ, ಅಚ್ಚುತ ಮಾಸ್ತರ್, ದಿನೇಶ್ ಗುರುಂಪು ಸೇರಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಾಲಯದ ವಿವಿಧ ಸಮಿತಿಗಳ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.