Home Uncategorized ನಾಳೆ (ಮಾ.21): ಸುಬ್ರಹ್ಮಣ್ಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ನಾಳೆ (ಮಾ.21): ಸುಬ್ರಹ್ಮಣ್ಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

0

ಸುಬ್ರಹ್ಮಣ್ಯ ಮಾ.20: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಕರ್ನಾಟಕ ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮನ್ವಯ ಸಮಿತಿ ಮಂಗಳೂರು, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ( ರಿ) ಸುಳ್ಯ , ಶ್ರೀ ವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ ,ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ( ನಿ) ಸುಬ್ರಹ್ಮಣ್ಯ ,ಇನ್ನರ್ವೀಲ್ ಕ್ಲಬ್ ಸುಬ್ರಹ್ಮಣ್ಯ ,ಓಂ ಶ್ರೀ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಮಣ್ಯ ,ಶ್ರೀ ಶಕ್ತಿ ಸಂಘಗಳು ಮತ್ತು ನವೋದಯ ಸ್ವಸಹಾಯ ಸಂಘಗಳು ಸುಬ್ರಹ್ಮಣ್ಯ, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಬ್ರಮಣ್ಯ ಇವುಗಳ ಸಂಯುಕ್ತ ಆಶಯದಲ್ಲಿ ನಾಳೆ ಮಾರ್ಚ್ 21 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕುಮಾರಧಾರ ಸಭಾಭವನದಲ್ಲಿ ಆಚರಿಸಲಾಗುವುದೆಂದು ಸಂಘಟಕರು ತಿಳಿಸಿರುತ್ತಾರೆ.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎದುರುಗಡೆಯಿಂದ ಗ್ರಾಮ ಪಂಚಾಯತ್ ಸಭಾಭವನದವರೆಗೆ ನಾರಿ ಶಕ್ತಿ ಜಾಥ ನಡೆಯಲಿರು ರುವುದು. ತದನಂತರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿರುವುದು.

NO COMMENTS

error: Content is protected !!
Breaking