Home Uncategorized ವಳಲಂಬೆಯಲ್ಲಿ ವಿಜ್ರಂಭಿಸಿದ “ಸತ್ಯದ ಸ್ವಾಮಿ ಕೊರಗಜ್ಜ” ಯಕ್ಷಗಾನ ಬಯಲಾಟ

ವಳಲಂಬೆಯಲ್ಲಿ ವಿಜ್ರಂಭಿಸಿದ “ಸತ್ಯದ ಸ್ವಾಮಿ ಕೊರಗಜ್ಜ” ಯಕ್ಷಗಾನ ಬಯಲಾಟ

0

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ಮಾ.24ರಂದು ವಿಜ್ರಂಭಣೆಯಿಂದ “ಸತ್ಯದ ಸ್ವಾಮಿ ಕೊರಗಜ್ಜ” ಎಂಬ ಯಕ್ಷಗಾನ ಬಯಲಾಟ ಪ್ರದರ್ಶನವಾಯಿತು.

ಕೀರ್ತಿ ಶೇಷ ದೇವಕಿ ದೇರಪ್ಪಜ್ಜನ ಮನೆ ಸ್ಮರಣಾರ್ಥ ಅವರ ಮಗ ಡಿ. ವೇಣುಗೋಪಾಲ ದೇರಪಜ್ಜನ ಮನೆ ಅವರ ಪ್ರಾಯೋಜಕತ್ವದಲ್ಲಿ
ಶ್ರೀ ಪಂಜುರ್ಲಿ ಪ್ರಸಾದಿತ ಯಕ್ಷಗಾನ ಮಂಡಳಿ ಶಾಸ್ತನ ಉಡುಪಿ ಇವರು “ಸತ್ಯದ ಸ್ವಾಮಿ ಕೊರಗಜ್ಜ” ಎಂಬ ಕಥಾ ಭಾಗವನ್ನು ಯಕ್ಷಗಾನ ಬಯಲಾಟ ವಾಗಿ ಆಡಿ ತೋರಿಸಿದರು. ಯಕ್ಷಗಾನವು ವೀಕ್ಷಿಸಲು ಸಭಾಂಗಣ ಪೂರ್ತಿ ಕಲಾಸಕ್ತರು ತುಂಬಿದರು. ಚೌಕಿ ಪೂಜೆ ಬಳಿಕ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸಮಿತಿ ಸದಸ್ಯರು, ನೂರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking