ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ರಚನೆಯ ಸಂದರ್ಭದಲ್ಲಿ ಕೂಜುಗೋಡು ಕುಟುಂಬ ಸದಸ್ಯರನ್ನು ಪರಿಗಣಿಸುವಂತೆ ಕೂಜುಗೋಡು ಮನೆತನದವರು ಮನವಿ ಮಾಡಿದ್ದಾರೆ.
ಕುಕ್ಕೆ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಮುಖಾಂತರ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಯವರಿಗೆ ಮನವಿ ಸಲ್ಲಿಸಿದ್ದು
ಮನವಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಮತ್ತು ನಮ್ಮ ಕೂಜುಗೋಡುಗೆ ನೂರಾರು ವರ್ಷಗಳ ಸಂಬಂಧವಿದೆ. 1837 ಅಮರ ಸುಳ್ಯ ಸ್ವಾತಂತ್ರ್ಯ ಅಂದಿನ ಬ್ರಿಟಿಷರ ಕಲೆಕ್ಟರ್ ಲೇವಿನ್ ವರದಿಯಲ್ಲಿ ಕುಜುಗೋಡು ಮನೆತನದವರು ಶ್ರೀ ಕ್ಷೇತ್ರದ ಆಡಳಿತ ಪಾರುಪತ್ಯ ನೋಡಿಕೊಳ್ಳುತ್ತಿರೆಂದು ತಿಳಿಸಿದ್ದಾರೆ.
ದೇವಸ್ಥಾನ ವ್ಯವಸ್ಥೆ ಸುವ್ಯವಸ್ಥಿತವಾಗಿ ಮುಂದುವರಿಸಲು ನಮ್ಮ ಮನೆತನವನ್ನು ಪರಿಗಣಿಸುತ್ತಿರುವುದು ದಾಖಲೆಗಳಿಂದ ಕಂಡುಕೊಂಡಿದ್ದೇವೆ. ಇಂತಹ ಐತಿಹಾಸಿಕ ಹಿನ್ನೆಲೆಯಲ್ಲಿರುವ ನಮ್ಮ ಮನೆತನ ಸದಸ್ಯರನ್ನು ಕಳೆದ ಅನೇಕ ವರ್ಷಗಳಿಂದ ವ್ಯವಸ್ಥಾಪನಾ ಸಮಿತಿ ಯಿಂದ ದೂರವಿಡಲಾಗಿದೆ ಇದು ನಮಗೆ ನೋವು ತಂದಿದೆ ರಾಜ್ಯ ಸರ್ಕಾರ ಮಾನ್ಯ ಮುಖ್ಯಮಂತ್ರಿ, ಮುಜರಾಯಿ ಸಚಿವರು, ಉಸ್ತುವಾರಿ ಮಂತ್ರಿಗಳು, ಧಾರ್ಮಿಕ ಪರಿಷತ್ ಮತ್ತು ಮುಜರಾಯಿ ಇಲಾಖೆ ಈ ಬಗ್ಗೆ ಗಮನಹರಿಸಿ ಕೂಜುಗೋಡು ಮನೆತನ ದವರಿಗೆ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.ಈ ಸಂದರ್ಭದಲ್ಲಿ ಶಿವಕುಮಾರ್ ಕೂಜುಗೋಡು,ನರೇಂದ್ರ ಕೂಜುಗೋಡು,ಜಯಪ್ರಕಾಶ್ ಕೂಜುಗೋಡು,ಶರತ್ ಕೂಜುಗೋಡು,ಅಶೋಕ್ ಕೂಜುಗೋಡು,ಅಜಿತ್ ಕೂಜುಗೋಡು,ಸೋಮಸುಂದರ್ ಕೂಜುಗೋಡು ಮತ್ತಿತರರು ಉಪಸ್ಥಿತರಿದ್ದರು.