ಅರಂತೋಡು ಮರ್ ಹೂಮ್ ಕೆ.ಎಂ ಶಾಹ್ ಮುಸ್ಲಿಯಾರ್ ರವರ ೬ನೇ ವರ್ಷದ ಪುಣ್ಯಸ್ಮರಣೆ ಹಾಗೂ ಗ್ರ್ಯಾಂಡ್ ಇಫ್ತಾರ್ ಕೂಟ

0

ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅರಂತೋಡು ಇದರ ವತಿಯಿಂದ ಮರ್ ಹೂಮ್ ಡಾ.ಕೆ.ಎಂ ಶಾಹ್ ಮುಸ್ಲಿಯಾರ್ ರವರ 6 ನೇ ವರ್ಷದ ಆಂಡ್ ನೇರ್ಚೆ ಹಾಗೂ ಆ ಪ್ರಯುಕ್ತ ಗ್ರ್ಯಾಂಡ್ ಇಪ್ತಾರ್ ಕೂಟವು ಮಾ. 25 ರಂದು ಅರಂತೋಡು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಯಿತು.

ಖತೀಬರಾದ ಬಹು| ಇಸ್ಮಾಯಿಲ್ ಫೈಝಿಯವರು ತಹ್ ಲೀಲ್ ಸಮರ್ಪಿಸಿ ದುವಾ ನೆರವೇರಿಸಿದರು. ಗ್ರ್ಯಾಂಡ್ ಇಪ್ತಾರ್ ಕೂಟವು ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಜೊತೆ ಕಾರ್ಯದರ್ಶಿಗಳಾದ ಎ.ಹನೀಫ್, ಅಮೀರ್ ಕುಕ್ಕುಂಬಳ, ನಿರ್ದೇಶಕರುಗಳಾದ ಹಾಜಿ ಅಬ್ದುಲ್ ಖಾದರ್ ಪಠೇಲ್, ಕೆ. ಎಂ ಮೊಯಿದು ಕುಕ್ಕುಂಬಳ, ಮನ್ಸೂರ್ ಪಾರೆಕ್ಕಲ್, ಮುಜೀಬ್, ಪಟೇಲ್ ಚಾರಿಟೇಬರ್ ಟ್ರಸ್ಟ್ ಅಧ್ಯಕ್ಷ ಅಧ್ಯಕ್ಷ ಹಾಜಿ ಬದುರುದ್ದೀನ್ ಪಠೇಲ್, ಕೋಶಾಧಿಕಾರಿ ಹಾಗೂ ಉಧ್ಯಮಿ ಸೈಫುದ್ಧೀನ್ ಪಠೇಲ್, ಕೆ.ಎಂ ಅನ್ವಾರ್ ನಿವೃತ್ತ ಉಪನ್ಯಾಸಕ ಹಾಜಿ ಅಬ್ದುಲ್ಲ ಮಾಸ್ತರ್, ಎ.ಹೆಚ್.ವೈ.ಎ ಪ್ರಧಾನ ಕಾರ್ಯದರ್ಶಿ ಪಸೀಲು, ಕೋಶಾಧಿಕಾರಿ ಹಾಜಿ ಅಝಾರುದ್ದೀನ್, ಜವಾದ್ ಪಾರೆಕ್ಕಲ್, ತಾಜುದ್ದೀನ್ ಅರಂತೋಡು, ಆಶಿಕ್ ಕುಕ್ಕುಂಬಳ, ಮುಝಮ್ಮಿಲ್, ಆಬಿದ್, ಟಿ.ಎಂ ಜಾವೇದ್ ತೆಕ್ಕಿಲ್, ಅಬ್ದುಲ್ಲ ಗುಂಡಿ, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್ ಎಸ್.ಇ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಹನೀಫ್ ಮೊಟ್ಟೆಂಗಾರ್, ಅಬೂಬಕ್ಕರ್ ಸಿದ್ಧೀಕ್, ಹಕೀಮ್ ಕೊಡಂಕೇರಿ, ಸರ್ಫುದ್ದೀನ್, ಕಬೀರ್ ಸೆಂಟ್ಯಾರ್, ಕೆ.ಎಂ ಮೊಹಿಸಿನ್, ಮುನೀರ್ ಸೆಂಟ್ಯಾರ್, ಶಹಬಾಝ್ ಮಿಸ್ ಬಾ, ಇನಾಚ್ ಮೊದಲಾದವರು ಉಪಸ್ಥಿತರಿದ್ದರು.