ಆಲೆಟ್ಟಿ ಗ್ರಾಮ ವ್ಯಾಪ್ತಿಯಲ್ಲಿರುವ ಕುಡೆಕಲ್ಲು ಮನೆತನದ ತರವಾಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾಮೂಲು ಪ್ರಕಾರ ನಡೆಯುವ ಶ್ರೀ ವಿಷ್ಣುಮೂರ್ತಿ ದೈವ ಹಾಗೂ ಉಪದೈವಗಳ ಕಳಿಯಾಟವು ಮಾ.24 ರಂದು ಆರಂಭಗೊಂಡಿತು.

ಮಾ.24 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ನಾಗತಂಬಿಲ ಸೇವೆ ನಡೆದುಶ್ರೀವೆಂಕಟರಮಣ ದೇವರ ಹರಿಸೇವೆಯಾಗಿ ರಾತ್ರಿ ಕಳಿಯಾಟಕ್ಕೆ ಕೂಡಿ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು. ನಂತರ ದೈವಸ್ಥಾನದಲ್ಲಿ ಕೈವೀದ್ ನಡೆಯಿತು. ಬಳಿಕಶ್ರೀವಯನಾಟ್ ಕುಲವನ್ ದೈವಸ್ಥಾನದಿಂದ ಕಲಶ ತಂದು ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ಮತ್ತು ಗುರು ಕಾರ್ನೋರು ದೈವದ ಕೋಲವು ನಡೆಯಿತು.

ಮಾ.25 ರಂದು ಪೂರ್ವಾಹ್ನ ಶ್ರೀ ಪೊಟ್ಟನ್ ದೈವದ ಕೋಲ, ಅಪರಾಹ್ನ ಶ್ರೀ ರಕ್ತೇಶ್ವರಿ ದೈವದ ಕೋಲವಾಗಿ ರಾತ್ರಿ ಶ್ರೀ ವಿಷ್ಣುಮೂರ್ತಿ ,ಶ್ರೀ ಧರ್ಮದೈವ,ಶ್ರೀ ಪಾಷಾಣಮೂರ್ತಿ ದೈವಗಳ ಕೋಲವು ಜರುಗಿತು.
ನಂತರ ಶ್ರೀ ದೈವದ ಕಲಶ ಹೊರಲಾಯಿತು. ಬಳಿಕ ಭಕ್ತಾದಿಗಳಿಂದ ಹರಕೆಯ ತುಲಾಭಾರ ಸೇವೆಯು ನಡೆದು ಶ್ರೀ ದೈವದ ಪ್ರಸಾದವಿತರಣೆಯಾಯಿತು.ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳ್ತೆದಾರರಾದ ಬಿಪಿನ್ ಕೆ.ವಿ, ಕುಟುಂಬದ ಯಜಮಾನರಾದ ಕೆ.ಎಲ್.ರಾಮಣ್ಣ ಗೌಡ, ಹಿರಿಯರಾದ ವಾಸುದೇವ ಗೌಡಕುಡೆಕಲ್ಲು,ದೈವಸ್ಥಾನದ ಪೂಜಾರಿ ರಾಘವ ಗೌಡ ಕುಡೆಕಲ್ಲು, ಹೊನ್ನಪ್ಪ ಗೌಡಕುಡೆಕಲ್ಲು,
ರತ್ನಾಕರ ಗೌಡ ಕುಡೆಕಲ್ಲು, ತೇಜಕುಮಾರ್ ಕೆ ಹಾಗೂ ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಭಾರತೀಯ
ತೀಯ ಸಮುದಾಯದ ಸದಸ್ಯರು ಸೇವೆಯಲ್ಲಿ ತೊಡಗಿಸಿಕೊಂಡರು