ಮಕ್ಕಳ ಜೊತೆ ಬೆರೆಯಲಿದ್ದಾರೆ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು
ಜೆಸಿಐ ಬೆಳ್ಳಾರೆ, ಕಲಾ ಮಂದಿರ ಬೆಳ್ಳಾರೆ, ನಿನಾದ ತಂಟೆಪ್ಪಾಡಿ ಇವರ ಸಹಯೋಗದಲ್ಲಿ ರಂಗ ಸಂಭ್ರಮ – 2025 ಮಕ್ಕಳ ರಾಜ್ಯ ಮಟ್ಟದ ರಂಗ ಬಣ್ಣ ಶಿಬಿರವು ಕೆ.ಪಿ.ಎಸ್.ಸಭಾಂಗಣ ಬೆಳ್ಳಾರೆಯಲ್ಲಿ ಎಪ್ರಿಲ್ 11ರಿಂದ ಎ. 17 ರವರೆಗೆ ನಡೆಯಲಿದೆ. ಬೆಳಿಗ್ಗೆ 9.00 ರಿಂದ ಸಂಜೆ 4.30 ರವರೆಗೆ ಶಿಬಿರ ನಡೆಯಲಿದೆ.
ವಯೋಮಿತಿ 6 ರಿಂದ 16 ವರ್ಷದ ವಿದ್ಯಾರ್ಥಿಗಳಿಗೆ ಅವಕಾಶವಿದೆ.
ರಂಗದಲ್ಲಿ ಮ್ಯಾಜಿಕ್ – ಮಾಯಾಲೋಕ,ಡಾಲ್ ತಯಾರಿಕೆ,ದೇಶಭಕ್ತಿ/ಜಾನಪದ/ಜಾಗೃತಿ ಗೀತೆ, ಸುಲಭ ಗಣಿತ , ನೃತ್ಯ ಬ್ಯಾಲೆ,ಮಿಮಿಕ್ರಿ,ಬಾನೆತ್ತರದ ಗಾಳಿಪಟ,ವರ್ಲಿ ಚಿತ್ರಗಳು,ಯೋಗ ಮತ್ತು ಪ್ರಾಣಾಯಾಮ,ಅಭಿನಯ ಗೀತೆಗಳು,ಸಮ್ಮೋಹಿನಿ ಶಾಸ್ತ್ರ,ನೆನಪಿನ ಆಟಗಳು,ರಂಗಾಟಗಳು,ನವರಸ ಅಭಿನಯಗಳು,ರೇಖಾಚಿತ್ರಗಳು,ಮಾತನಾಡುವ ಗೊಂಬೆ ಕಲಿಸಿಕೊಡಲಾಗುವುದು.
ಮಕ್ಕಳ ಜೊತೆ ಬೆರೆಯುವ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಜ್ಯೂನಿಯರ್ ಶಂಕರ್ ,ಗಿಲಿ ಗಿಲಿ ಮ್ಯಾಜಿಕ್, ಕ್ರಿಸ್ಟೋಪರ್ ನೀನಾಸಂ ಮತ್ತು ತಂಡ ಹಾಗೂ ಹಲವು ಮಂದಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಜೊತೆ ಬೆರೆಯುವರು. ಊಟ ತಿಂಡಿ ಪಾನೀಯ ವ್ಯವಸ್ಥೆ ಇರುತ್ತದೆ.



ಹೆಚ್ಚಿನ ಮಾಹಿತಿಗಾಗಿ : 7899062072, 7022524711,9148166236,9901443642,9448625463 ಸಂಪರ್ಕಿಸಿ