ಕರ್ನಾಟಕ ರಾಜ್ಯ ರೈತ ಉತ್ಪಾದಕ ಸಹಕಾರಿ ಸಂಘ ಬೆಂಗಳೂರು ಇದರ ನಿರ್ದೇಶಕರಾಗಿ ಆಯ್ಕೆಯಾಗಿರುವ ಕಣ್ಕಲ್ ವೀರಪ್ಪ ಗೌಡರನ್ನು ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರು ಗೌರವಿಸಿದರು.
ರಾಜ್ಯದಿಂದ ಆಯ್ಕೆಯಾದ 12 ಮಂದಿ ನಿರ್ದೇಶಕರನ್ನು ಕೂಡಾ ತಮ್ಮ ಮನೆಗೆ ಬರಮಾಡಿಕೊಂಡ ಕೃಷಿ ಸಚಿವರು ಸನ್ಮಾನ ನೆರವೇರಿಸಿದರು.



ವೀರಪ್ಪ ಗೌಡರು ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.