Home ಚಿತ್ರವರದಿ ಅರಂತೋಡು ಮಸೀದಿಯಲ್ಲಿ ಸೇವೆಗೈದಿದ್ದ ಶೈಖುನಾ ಡಾ.ಕೆ.ಎಂ.ಶಾಹ್ ಮುಸ್ಲಿಯಾರ್ ರವರ ಅನುಸ್ಮರಣೆ

ಅರಂತೋಡು ಮಸೀದಿಯಲ್ಲಿ ಸೇವೆಗೈದಿದ್ದ ಶೈಖುನಾ ಡಾ.ಕೆ.ಎಂ.ಶಾಹ್ ಮುಸ್ಲಿಯಾರ್ ರವರ ಅನುಸ್ಮರಣೆ

0

ಅರಂತೋಡು ಮಸೀದಿಯಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆಗೈದು ನಮ್ಮನ್ನಗಲಿದ ಶೈಖುನಾ ಡಾ.ಕೆ.ಎಂ.ಶಾಹ್ ಮುಸ್ಲಿಯಾರ್ ರವರ ಅನುಸ್ಮರಣೆ ಮಾ.೨೫ ರಂದು ಮುಂಜಾನೆ ಅರಂತೋಡು ಜಮಾತ್‌ನ ಸದಸ್ಯರು ಡಾ.ಶೈಖುನಾ ಶಾಹ್ ಮುಸ್ಲಿಯಾರ್ ರವರ ದಫನಗೈದ ಸ್ಥಳವಾದ ಆತೂರಿನ ಗಂಡಿಬಾಗಿಲು ಮಸೀದಿಗೆ ತೆರಳಿ ಪ್ರಾರ್ಥನೆ ಮಾಡಿದರು.


ದುವಾ ನೇತೃತ್ವ ವನ್ನು ಅರಂತೋಡು ಮಸೀದಿ ಖತಿಬ್ ಇಸ್ಮಾಯಿಲ್ ಫೈಝಿ ವಹಿಸಿದ್ದರು. ಅರಂತೋಡು ಜಮಾತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕಾರ್ಯದರ್ಶಿ ಕೆ.ಎಂ.ಮೂಸಾನ್, ಹಾಜಿ ಬದ್ರುದ್ದೀನ್ ಪಟೇಲ್, ಅನ್ವರುಲ್ ಹುದಾ ಯಂಗ್ ಮೆನ್ಸ್ ಅಧ್ಯಕ್ಷ ಮಜೀದ್, ಅಮೀರ್ ಕುಕ್ಕುಂಬಳ, ಮಾಜಿ ಸೈನಿಕ ಫಸಿಲು, ಮೊಯ್ದು ಕುಕ್ಕುಂಬಳ, ಸಂಶುದ್ದೀನ್ ಕೆ.ಯು, ಯುವ ಉದ್ಯಮಿ ಸೈಫುದ್ದಿನ್ ಪಟೇಲ್, ಹನೀಫ್ ಎ., ಶಾಹ್ ಉಸ್ತಾದ್ ರವರ ಶಿಷ್ಯ ಮಹಮ್ಮದ್ ಕುಂಞಿ ಆತೂರು, ಮನ್ಸೂರ್ ಪಾರೆಕ್ಕಲ್, ಅನ್ವರ್ ಕೆ.ಎಂ, ಎಸ್‌ಕೆಎಸ್‌ಎಸ್‌ಎಫ್ ಅರಂತೋಡು ಶಾಖೆ ಅಧ್ಯಕ್ಷ ಜುಬೇರ್, ಕಾರ್ಯದರ್ಶಿ ಸಂಶುದ್ದೀನ್ ಕ್ಯೂರ್, ಮುಜೀಬ್ ಎ., ಜಾವೇದ್ ಪಾರೆಕ್ಕಲ್, ಸೂಫಿ ಹಸೈನಾರ್, ಮಹಮ್ಮದ್ ಅಳಿಕೆ, ಹಮೀದ್, ತಾಜುದ್ದೀನ್ ಅರಂತೋಡು ಸೇರಿದಂತೆ ಜಮಾತ್‌ನ ಸದಸ್ಯರು ಪಾಲ್ಗೊಂಡಿದ್ದರು.

NO COMMENTS

error: Content is protected !!
Breaking