Home ಚಿತ್ರವರದಿ ಕನಕಮಜಲು ಗ್ರಾ.ಪಂ. ಉಪಾಧ್ಯಕ್ಷರಾಗಿ ಶ್ರೀಧರ ಕುತ್ಯಾಳ ಅವಿರೋಧ ಆಯ್ಕೆ

ಕನಕಮಜಲು ಗ್ರಾ.ಪಂ. ಉಪಾಧ್ಯಕ್ಷರಾಗಿ ಶ್ರೀಧರ ಕುತ್ಯಾಳ ಅವಿರೋಧ ಆಯ್ಕೆ

0

ಕನಕಮಜಲು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾಗಿ ಶ್ರೀಧರ ಕುತ್ಯಾಳ‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ರವಿಚಂದ್ರ ಕಾಪಿಲರವರು ಇತ್ತೀಚೆಗೆ ನಿಧನರಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಮಾ.25ರಂದು ಚುನಾವಣೆ ನಡೆಯಿತು.

ಸಾಮಾನ್ಯ ಮೀಸಲು ಸ್ಥಾನದ ಉಪಾಧ್ಯಕ್ಷತೆಗೆ ಪಂಚಾಯತ್ ನ ಎಲ್ಲ 6 ಸದಸ್ಯರು ಅರ್ಹರಾಗಿದ್ದರು. ಉಪಾಧ್ಯಕ್ಷತೆ ಶ್ರೀಧರ ಕುತ್ಯಾಳರ ಹೆಸರನ್ನು ಪಂಚಾಯತ್ ಸದಸ್ಯೆ ಪ್ರೇಮಲತಾ ಸೂಚಿಸಿದ್ದರು. ‌ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.

ತಹಶೀಲ್ದಾರ್ ಮಂಜುಳಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಉಪತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್., ಪಿಡಿಒ ಸರೋಜಿನಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ಗ್ರಾ.ಪಂ. ಅಧ್ಯಕ್ಷೆ ಶಾರದಾ ಉಗ್ಗಮೂಲೆ, ಸದಸ್ಯರುಗಳಾದ ಪ್ರೇಮಲತಾ ಪಂಜಿಗುಂಡಿ, ದೇವಕಿ ಕುದ್ಕುಳಿ, ಇಬ್ರಾಹಿಂ ಕಾಸಿಂ ಕನಕಮಜಲು, ಸುಮಿತ್ರ ಕುತ್ಯಾಳ, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ,ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹೇಮಂತ್ ಮಠ, ಬೂತ್ ಅಧ್ಯಕ್ಷ ಜಗನ್ನಾಥ, ಈಶ್ವರ ಕೊರಂಬಡ್ಕ ಮೊದಲಾದವರಿದ್ದರು.

ಶ್ರೀಧರ ಕುತ್ಯಾಳರು ಎರಡನೇ ಅವಧಿಗೆ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದು, 5 ವರ್ಷ ಉಪಾಧ್ಯಕ್ಷರಾಗಿ, ಎರಡೂವರೆ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಇದೀಗ ಮತ್ತೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

NO COMMENTS

error: Content is protected !!
Breaking