ಸುಳ್ಯದಲ್ಲಿ ಮುಗೇರ ಸಂಘಟನೆ ಸದಸ್ಯರಿಂದ ಪತ್ರಿಕಾಗೋಷ್ಠಿ
ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಸಮಿತಿಗೆ ಈ ಗಾಗಲೇ ಸರಕಾರದಿಂದ ಬಂದಿದೆ ಎನ್ನಲಾಗಿರುವ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಯ ಸದಸ್ಯರಿಗೆ ನಾಮ ನಿರ್ದೇಶಕರಾಗಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ಸುಳ್ಯ ಮುಗೇರ ಸಂಘಟನೆಯ ಸದಸ್ಯರುಗಳು ಮಾ ೨೭ ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ತಾಲೂಕು ಮುಗೇರ ಸಂಘದ ಸಂಚಾಲಕ ಅಚ್ಚುತ ಮಲ್ಕಜೆಯವರು ‘ಕರ್ನಾಟಕ ಸರಕಾರವು ಧಾರ್ಮಿಕ ದತ್ತಿ ಇಲಾಖೆಯ ‘ಎ’ ಗ್ರೇಡ್ ದೇವಾಲಯದಲ್ಲಿ ಶೋಷಿತ ವರ್ಗದವರಿಗೆ ಸ್ಥಾನಮಾನ ಕೊಟ್ಟು ಅಂಬೇಡ್ಕರ್ ಅವರ ಆಶಯದಂತೆ ಸ್ಥಾನಮಾನ ನೀಡಿರುವುದು ನಮಗೆ ಸಂತಸ ತಂದಿದೆ. ಇದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿದಂತಾಗಿದೆ. ಇದರಿಂದ ಸರಕಾರ ಸಾಮಾಜಿಕ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸದಸ್ಯರು ಆಯ್ಕೆಯಾಗಿದ್ದು ಮಾಧ್ಯಮದಲ್ಲಿ ಬಂದಿದೆ. ಆದರೆ, ಅಧಿಕೃತವಾಗಿ ರಾಜ್ಯ ಧಾರ್ಮಿಕ ಪರಿಷತ್ ನಿಂದ ಸುತ್ತೋಲೆ ಬಿಡುಯಾಗಬೇಕಿದೆ. ಈಗಾಗಲೇ ಬಿಡುಗಡೆ ವೈರಲ್ ಆಗಿರುವ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಯ ಕೋಟದಡಿಯಲ್ಲಿ ಹೆಸರು ಇರುವುದು ಪರಿಶಿಷ್ಟ ಜಾತಿಗೆ ಸಿಕ್ಕಿದ ಗೌರವವೆಂದು ಭಾವಿಸಿರುತ್ತೇವೆ ಎಂದು ಹೇಳಿದರು.



ಮುಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತಡ್ಕ ಮಾತನಾಡಿ, ಪರಿಶಿಷ್ಟ ಜಾತಿಯನ್ನು ಪರಿಗಣಿಸಿ ಈ ಅವಕಾಶ ನೀಡಿರುವುದು ನಿಜಕ್ಕೂ ಸಂತೋಷ ತಂದಿದೆ. ಆದ್ದರಿಂದ ನಾವು ಯಾರಿಗೂ ಇಲ್ಲಿ ಕೊಡ ಬಾರದು ಎಂದು ಹೇಳುವುದಿಲ್ಲ ಅವಕಾಶ ಇದ್ದರೆ ಎಲ್ಲಾ ಪಂಗಡ ದವರಿಗೂ ನೀಡಲಿ. ಆದರೆ ಮುಂದಿನ ದಿನದಲ್ಲಿ ಪಟ್ಟಿ ಪುನರ್ ರಚನೆ ಗೊಳ್ಳುವುದಾದರೆ ಈಗ ನೀಡಿರುವ ಹೆಸರನ್ನು ಮತ್ತು ಪಂಗಡವನ್ನು ಕೈ ಬಿಡುವ ಕೆಲಸ ಆಗಬಾರದು. ಆಗೆ ಆದಲ್ಲಿ ನಮ್ಮ ನ್ಯಾಯಕ್ಕಾಗಿ ನಾವು ಹೋರಾಟ ಮಾಡಬೇಕಾಗುತ್ತದೆ. ಅದಕ್ಕೆ ಆಸ್ಪದ ಕೊಡಬೇಡಿ ಎಂದು ಹೇಳಿದರು. ಅಲ್ಲದೆ ನೂತನ ವ್ಯವಸ್ಥಾಪನ ಸಮಿತಿಯಿಂದ ದೇವಸ್ಥಾನವು ಅಭಿವೃದ್ಧಿ ಪಥದಲ್ಲಿ ಸಾಗಿ ಸರ್ವರಿಗೂ ಸಾಮಾಜಿಕ ನ್ಯಾಯ ದೊರಕುವಂತಾಗಾಲಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘ ದ ಯುವ ವೇದಿಕೆಯ ಗೌರವ ಅಧ್ಯಕ್ಷ ಪ್ರಕಾಶ್ ಪಿ.ಎಸ್.ಪಾತೆಟ್ಟಿ, ಕನಕಮಜಲು ಗ್ರಾಮ ಸಮಿತಿಯ ಮುಖಂ ಡ ಬಾಬು, ತಾಲೂಕು ಸಂಘದ ಗೌರವ ಅಧ್ಯಕ್ಷ ಶಂಕರ್ ಪೆರಾಜೆ ಉಪಸ್ಥಿತರಿದ್ದರು.