ಸೌಗತ್ ಎ ಮೋದಿ ಹೆಸರಿನಲ್ಲಿ ಮುಸ್ಲಿಂ ಭಾಂದವರಿಗೆ ರಂಜಾನ್ ಕಿಟ್ ಹಂಚಲು ಬಯಸಿರುವ ಪ್ರಧಾನ ಮಂತ್ರಿ ಮೋದಿಯವರ ಕುರಿತು ನಾವು ವಿಮರ್ಶೆ ನಡೆಸುವುದಾದರೆ ಆ ಯೋಜನೆ ಒಂದು ಸಮುದಾಯದ ಅಭಿವೃದ್ಧಿ ಗಾಗಿ ಪ್ರಾಮಾಣಿಕ ವಾಗಿರಲಿ ಎಂದು ಕಾಂಗ್ರೆಸ್ ಮುಖಂಡ ಎಂ ವೆಂಕಪ್ಪ ಗೌಡರು ತಿಳಿಸಿದ್ದಾರೆ.
ಈ ಯೋಜನೆ ಒಂದು ಅರ್ಥದಲ್ಲಿ ದೇಶದಲ್ಲಿ ಶಾಂತಿ ನೆಲೆಯೂರಲು ಮಾಡಿದ ದಿಟ್ಟ ಹೆಜ್ಜೆ ಎಂದು ಹೇಳಬಹುದು.ಆದರೆ ಇದು ತೋರಿಕೆಯಾಗಿ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಿಟ್ ಹಂಚುವ ಕೆಲಸವಾಗಿದ್ದರೆ, ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಮೋಸಗೊಳಿಸುವ ನಾಟಕವೆಂದು ಹೇಳಿದರೂ ತಪ್ಪಾಗದು ಎಂದು ಭಾವಿಸಬಹುದು.
ಒಂದು ವೇಳೆ ಮುಸ್ಲಿಂ ಸಮುದಾಯದ ಮೇಲೆ ಇವರಿಗೆ ನಿಜವಾದ ಪ್ರೀತಿ ಇದ್ದಿದ್ದರೆ, ಇಷ್ಟೊಂದು ಮಂದಿರಗಳಲ್ಲಿ ದೇವಸ್ಥಾನ ಹುಡುಕುವ ಕೆಲಸ ಯಾಕೆ ಮಾಡಬೇಕಿತ್ತು? ಆ ಸಮುದಾಯದ ಆಸ್ತಿ-ಪಾಸ್ತಿಯ ಮೇಲೆ ಬುಲ್ಡೋಜರ್ ಓಡಿಸುವ ಕೆಲಸ ಯಾಕೆ ಮಾಡಬೇಕಿತ್ತು? ಸಿ ಎ ಎ ವಿಚಾರದಲ್ಲಾಗಲಿ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ದಿಗೆ ಅನುದಾನ ನೀಡುವ ವಿಷಯದಲ್ಲಾಗಲಿ, ಈ ಬೇಧಭಾವ ಯಾಕೆ?



ಒಂದೆಡೆ ಸಮುದಾಯದ ಬೆಳೆದಿಗಾಗಿ ಕಿಟ್ ವಿತರಿಸುವ ನಾಟಕ, ಮತ್ತೊಂದೆಡೆ ಒಂದು ವ್ಯಕ್ತಿಯ ಸಣ್ಣ ತಪ್ಪಿಗೆ ಇಡೀ ಸಮುದಾಯವನ್ನು ಗುರಿಯಾಗಿಸಿ, ದಿನ ಬೆಳಗಾದರೆ ಬಾಯಿಗೆ ಬಂದ ಹಾಗೆ ಮಾತಾಡುವ ರಾಜಕೀಯ ನಾಯಕರು — ಈ ಸತ್ಯವನ್ನು ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆಯೇ? ಎನ್ನುವುದು ಕುತೂಹಲದ ವಿಷಯ ಎಂದು ಅವರು ಹೇಳಿದ್ದಾರೆ.