ಕನಕಮಜಲು ಗ್ರಾಮದ ಬಾಳೆಹಿತ್ತಿಲು ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಉತ್ಸವವು ಮಾ.27 ಮತ್ತು 28ರಂದು ನಡೆಯಲಿದೆ.
ಮಾ.27ರಂದು ಬೆಳಗ್ಗೆ ರಕೇಶ್ವರಿ, ನಾಗ, ಗುಳಿಗ ತಂಬಿಲ ನಡೆದು ರಾತ್ರಿ ಭಂಡಾರ ತೆಗೆಯುವುದು. ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ, ಬಳಿಕ ಅನ್ನಸಂತರ್ಪಣೆ, ರಾತ್ರಿ 11 ಗಂಟೆಗೆ ಕುಳ್ಳಾಟ (ಶ್ರೀ ವಿಷ್ಣುಲೀಲೆ) ನಡೆಯುವುದು.



ಮಾ.28ರಂದು ಪ್ರಾರ್ತಕಾಲ 5 ಗಂಟೆಗೆ ಕೆಂಡಸೇವೆ, ಮಾರಿಕಳ, ಪ್ರಸಾದ ವಿತರಣೆ ನಡೆಯುವುದು ಎಂದು ಸಮಿತಿಯವರು ತಿಳಿಸಿದ್ದಾರೆ.