ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ – ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಛಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಆರಂಭಗೊಂಡಿದ್ದು, ಏ.೧೦ರವರೆಗೆ ನಡೆಯಲಿದೆ.

ಇಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು.


ಈ ಸಂದರ್ಭದಲ್ಲಿ ಆಡಳಿತ ಮೊಕ್ತೆಸರ ಜಿತೇಂದ್ರ ನಿಡ್ಯಮಲೆ, ತಕ್ಕ ಮುಖ್ಯಸ್ಥರು,ಆಡಳಿತ ಸಮಿತಿಯ ಸದಸ್ಯರು, ಭಕ್ತಭಿಮಾನಿಗಳು, ಸಿಬ್ಬಂದಿ ವರ್ಗ, ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು, ದೇವರ ಪ್ರಸಾದ ಸ್ವೀಕರಿಸಿದರು.

.

ರಾತ್ರಿ ಗಂಟೆ ೮-೦೦ರಿಂದ ತುಳು ಕೋಲದ ಬೆಳ್ಳಾಟ ೨, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು ೨. ಮಾ.೨೮ರಿಂದ ಮಧ್ಯಾಹ್ನ ಗಂಟೆ ೧೨-೦೦ರಿಂದ ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ ೮-೦೦ರಿಂದ ತುಳು ಕೋಲ ೨ರ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು ನಡೆಯಲಿದೆ.
ಮಾ.29 ರಂದು ಮಧ್ಯಾಹ್ನ ಗಂಟೆ ೧೨-೦೦ರಿಂದ ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ ೬-೩೦ರಿಂದ ಪಳ್ಳಿಯಾರ ಬಾಗಿಲು ತೆರೆಯುವುದು, ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು ೨ ಮತ್ತು ಅವುಗಳ ತಿರುವಪ್ಪಗಳು ೨ ನಡೆಯಲಿದೆ.