ಬೆಟ್ಟಂಪಾಡಿ ಕೊರಗಜ್ಜ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ- ನೂತನ ಕಚೇರಿ ಉದ್ಘಾಟನೆ, ಗೃಹ ಪ್ರವೇಶ ಕಾರ್ಯಕ್ರಮ

0

ಸುಳ್ಯ ಕಸಬಾದ ಹಳೆ ಗೇಟು ಬಳಿಯ ಬೆಟ್ಟಂಪಾಡಿ ಸ್ವಾಮಿ ಕೊರಗಜ್ಜ ದೈವಸ್ಥಾನ ದಲ್ಲಿ ದೈವಸ್ಥಾನದ ಉತ್ಸವ ಸಮಿತಿಯ ಆಶ್ರಯದಲ್ಲಿ 4 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಮಾ. 19 ರಂದು ಜರುಗಿತು.

ಬೆಳಗ್ಗೆ ಪುರೋಹಿತ್ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ದೈವಸ್ಥಾನದ ನೂತನ ಕಚೇರಿ ಉದ್ಘಾಟನೆಯು‌ ನೆರವೇರಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಮೂಲ ಮನೆಯ ಶ್ರೀಮತಿ ರಾಧಾಮೋಹನ ರವರಿಗೆ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಸಂಜೆ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ಮತ್ತು ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಚಿಲಿಪಿಲಿ ನೃತ್ಯ ಕಾರ್ಯಕ್ರಮವು ಪ್ರದರ್ಶನವಾಯಿತು. ರಾತ್ರಿ ಗಾಯಕ ಶಿವಪ್ರಸಾದ್ ಆಲೆಟ್ಟಿ ಯವರ ನೇತೃತ್ವದಲ್ಲಿ ಜಿಲ್ಲೆಯ ಪ್ರಸಿದ್ಧ ಗಾಯಕರಿಂದ “ಗಾನಲಹರಿ” ಕಾರ್ಯಕ್ರಮವು ನಡೆಯಿತು.
ಆಗಮಿಸಿದ ಎಲ್ಲರಿಗೂ ರಾತ್ರಿ ಅನ್ನ ಪ್ರಸಾದ ವಿತರಣೆಯಾಯಿತು.


ಪ್ರತಿಷ್ಠಾವಾರ್ಷಿಕೋತ್ಸವದ ಅಂಗವಾಗಿ ಸಂಜೆ ವಿಶೇಷವಾಗಿ ಮಂತ್ರವಾದಿ ಗುಳಿಗ ದೈವಸ್ಥಾನದಲ್ಲಿ ಸುರೇಶ್ ಬೆಟ್ಟಂಪಾಡಿ ಯವರು ದೀಪಾರಾಧನೆ ಮಾಡುವುದರೊಂದಿಗೆ ದೈವಸ್ಥಾನದ ಪೂಜಾರಿ ದೀಕ್ಷಿತ್ ಶಾಂತಿನಗರ ರವರು ಪ್ರಾರ್ಥನೆಯನ್ನು ನೆರವೇರಿಸಿದರು. ಬಳಿಕ ಕೊರಗಜ್ಜ
ದೈವದ ಸಾನಿಧ್ಯದಲ್ಲಿ ದೀಪಾರಾಧನೆಯೊಂದಿಗೆ ಪ್ರಾರ್ಥನೆಯಾಗಿ ಅಗೇಲು ಸೇವೆಯು ನಡೆಯಿತು.

ದೈವಸ್ಥಾನದ ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆಯು ನಡೆಯಿತು.
ಮುಖ್ಯ ಅಭ್ಯಾಗತರಾಗಿ ನಗರ ಪಂಚಾಯತ್ ಉಪಾಧ್ಯಕ್ಷ ಬುದ್ದ ನಾಯ್ಕ್ ಹಳೆಗೇಟು, ಉದ್ಯಮಿ ಸ್ವಾಗತ್ ಐಸ್ ಕ್ರೀಮ್ ಮಾಲಕ ರೊ. ಪ್ರಭಾಕರನ್ ನಾಯರ್, ದೈವ ನರ್ತಕ ಜಯರಾಮ ಬೊಳಿಯಮಜಲು, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ,ಮಂಜುನಾಥೇಶ್ವರ ಭಜನಾ ಮಂದಿರದ ಅಧ್ಯಕ್ಷ ವಿಠಲ ಎ.ಆರ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಚಿತ್ರ ಕಲಾವಿದೆ ಪೂಜಾ ಬೋರ್ಕರ್ ರವರನ್ನು ಸನ್ಮಾನಿಸಲಾಯಿತು. ಅವರು ರಚಿಸಿದ ಕೊರಗಜ್ಜ ದೈವದ ಭಾವಚಿತ್ರವನ್ನು ದೈವಸ್ಥಾನಕ್ಕೆ ಅವರು ‌ಕೊಡುಗೆಯಾಗಿ ನೀಡಿದರು.


ನಿರ್ದೇಶಕ ರವೀಶ್ ಪಡ್ಡಂಬೈಲು ಸ್ವಾಗತಿಸಿದರು. ಕಾರ್ಯದರ್ಶಿ ಆನಂದ ಬೆಟ್ಟಂಪಾಡಿ ವಂದಿಸಿದರು. ಶ್ರೀಮತಿ ಗಾಯತ್ರಿ ಚಿದಾನಂದ ರವರು ಕಾರ್ಯಕ್ರಮ ನಿರೂಪಿಸಿದರು.
ಸಮಿತಿ ಉಪಾಧ್ಯಕ್ಷ ಸುನಿಲ್ ಕುಮಾರ್ ಕೆ.ಎಸ್, ನಿರ್ದೇಶಕ ಅನೂಪ್ ಕಮಲಾಕ್ಷ ಪೈ, ಖಜಾಂಜಿ ಚಂದ್ರ ರಾವ್, ಜತೆ ಕಾರ್ಯದರ್ಶಿ ಚಂದ್ರಶೇಖರ ಶಾಂತಿನಗರ ಹಾಗೂ ಸಮಿತಿಯ ಸದಸ್ಯರು ಸಹಕರಿಸಿದರು.