ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಬಂಧಿಸಿದ ಜಾಗವೊಂದು ನ್ಯಾಯಾಲಯದ ಮುಖಾಂತರ ಮತ್ತೆ ದೇವಾಲಯಕ್ಕೆ ಸುಪರ್ಧಿಗೆ ಬಂದಿದ್ದು ಅದರಲ್ಲಿದ್ದ ಕಟ್ಟಡ ತೆರವು ಇಂದು ನಡೆಯಿತು.

ಕಾಶಿಕಟ್ಟೆ ರಥಬೀದಿಯ ಮಧ್ತದ ಅಂಚೆ ಕಛೇರಿ ಮುಂಭಾಗದಲ್ಲಿ ಕುಕ್ಜೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹಾಗೂ ಕುಂಞಕ್ಕ ಎಂಬವರಿಗೆ ಜಾಗದ ತಕರಾರು ಇತ್ತೆನ್ನಲಾಗಿದೆ. ಅದಕ್ಕೆ ಸಂಬಂಧಿಸಿದ ತಕರಾರು ನ್ಯಾಯಾಲಯದಲ್ಲಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು ಜಾಗವು ದೇವಾಲಯಕ್ಕೆ ಸಂಬಂಧಿಸಿದ ಜಾಗವೆಂದು ಆದೇಶ ವಾಗಿತ್ತು. ಇದರನ್ವಯ ಕಂದಾಯ ಇಲಾಖೆಯ ವತಿಯಿಂದ ಜಾಗದ ಹಕ್ಕನ್ನು ದೇವಾಲಯಕ್ಕೆ ಹಸ್ತಾಂತರಿಸಿದ್ದು ಅದರಂತೆ ಜಾಗದಲ್ಲಿದ್ದ ಹಳೆ ಕಟ್ಟಡ ತೆರವು ಕಾರ್ಯಾಚರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯದ ಅಧಿಕಾರಿಗಳು, ಸಿಬ್ಬಂದಿಗಳು ಭದ್ರತಾ ಸಿಬ್ಬಂದಿಗಳು ಉಪಸ್ಥಿತರಿದ್ದರು.