ಸುಳ್ಯ ಲಯನ್ಸ್ ಕ್ಲಬ್ಬಿಗೆ ಜಿಲ್ಲಾ ಗವರ್ನರ್ ಲಯನ್ ಭಾರತಿ ಬಿ.ಎಂ ರವರ ಅಧಿಕೃತ ಭೇಟಿ ‌ಕಾರ್ಯಕ್ರಮ

0

ಕಾಲು ಕಳೆದುಕೊಂಡ ಅಶಕ್ತರಿಗೆ ಕೃತಕ ಕಾಲು ಜೋಡಣೆಗೆ ಕ್ಲಬ್ ವತಿಯಿಂದ ನೆರವು- ಲಯನ್ ಭಾರತಿ ಬಿ.ಎಂ

ಮಂಗಳೂರಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಪಿ.ಡಿ.ಜಿ ಡಾ.ಶಾಂತರಾಮ ಶೆಟ್ಟಿ ಯವರ ಸಹಕಾರದೊಂದಿಗೆ ಅಪಘಾತ ಅನಾಹುತಕ್ಕೊಳಗಾಗಿ ಕಾಲು ಕಳೆದುಕೊಂಡ ಅಶಕ್ತರಿಗೆ ಕೃತಕ ಕಾಲು ಜೋಡಣೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸುಮಾರು 35 ಮಂದಿ ಅರ್ಹ ಫಲಾನುಭವಿಗಳ ಮಾಹಿತಿ ಲಭಿಸಿದೆ ಎಂದು ಸುಳ್ಯ ಲಯನ್ಸ್ ಕ್ಲಬ್ಬಿಗೆ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದ ಅಂಗವಾಗಿ ಸಂಜೆ ನಡೆದ ಸಮಾರಂಭದಲ್ಲಿ ಗವರ್ನರ್ ಲಯನ್ ಭಾರತಿ ಬಿ.ಎಂ ರವರು ತಿಳಿಸಿದರು.


ಕಾಲಿಲ್ಲದೆ ಬವಣೆ ಪಡುತ್ತಿರುವ ವ್ಯಕ್ತಿ ಗಳನ್ನು ಗುರಿತಿಸಿ ಉತ್ತಮ ಗುಣಮಟ್ಟದ ಕೃತಕ ಕಾಲಿನ ಜೋಡಣೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು. ಪ್ರಸ್ತುತ ವರ್ಷದ ಬಹು ಮುಖ್ಯ ಯೋಜನೆ ಇದಾಗಿದ್ದು ಅಂದಾಜು ಸುಮಾರು 28 ಲಕ್ಷ ವೆಚ್ಚ ತಗಲುವುದು. ಕೃತಕ ಕಾಲು ಜೋಡಿಸಿದ ವ್ಯಕ್ತಿಗೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿದೆ ಎಂಬ ಮಾಹಿತಿ ನೀಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ
ಪಿ.ಡಿ.ಜಿ ಲಯನ್ ಎಂ.ಬಿ.ಸದಾಶಿವ, ಪ್ರಾಂತೀಯ ಅಧ್ಯಕ್ಷ ಲಯನ್ ಗಂಗಾಧರ ರೈ, ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ಗೀತಾ ಆರ್.ರಾವ್, ಐ.ಪಿ.ಪಿ ಲಯನ್ ವೀರಪ್ಪ ಗೌಡ, ವಲಯಾಧ್ಯಕ್ಷೆ ಲಯನ್ ರೂಪಶ್ರೀ ಜೆ.ರೈ, ಕಾರ್ಯದರ್ಶಿ ಲಯನ್ ರಾಮಚಂದ್ರ ಪಲ್ಲತಡ್ಕ, ಕೋಶಾಧಿಕಾರಿ ಲಯನ್ ರಮೇಶ್ ಶೆಟ್ಟಿ‌ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸಾಂದೀಪ್ ವಿಶೇಷ ಚೇತನ ಮಕ್ಕಳ ಶಾಲೆಗೆ ರೂ.20 ಸಾವಿರ ಕೊಡುಗೆ ನೀಡಲಾಯಿತು. ಸವಣೂರಿನ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಗೆ ರೂ.10 ಸಾವಿರ ಕೊಡುಗೆ ನೀಡಲಾಯಿತು. ಎಂ.ಜಿ.ಎಂ. ಕೊಡಿಯಾಲಬೈಲ್ ಶಾಲೆಗೆ ರೋಸ್ಟಮ್ ಕೊಡುಗೆ, ಯೋಗ ಪಟು ಕು.ಸೋನಾ ಅಡ್ಕಾರ್ ರವರಿಗೆ ಪುರಸ್ಕಾರ ಮಾಡಲಾಯಿತು. ಕ್ಲಬ್ಬಿಗೆ ನೂತನ ಸದಸ್ಯರಾದ ದಯಾನಂದ ಡಿ.ಕೆ, ಸ್ಟೀಫನ್ ಯಂ.ಎ, ರಘೋತ್ತಮ ಭಟ್, ವಿಜಯಾನಂದ ಸೇರ್ಪಡೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಲಯನ್ ಭಾರತಿ ಬಿ.ಎಂ ರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಲಯನ್ ಶೋಭಾ ರಾಮಚಂದ್ರ ಪಲ್ಲತಡ್ಕ ಪ್ರಾರ್ಥಿಸಿದರು. ಲಯನ್ ರಾಮಕೃಷ್ಣ ರೈ ಸ್ವಾಗತಿಸಿದರು. ಲಯನ್ ರಾಮಚಂದ್ರ ಪಲ್ಲತಡ್ಕ ವರದಿ ವಾಚಿಸಿದರು. ಲಯನ್ ವಿನೋದ್ ಲಸ್ರಾದೋ ಅಭಿನಂದನಾ ಪತ್ರ ವಾಚಿಸಿದರು. ಲಯನ್ ರಮಿತ ಜಯರಾಮ ರಾಜ್ಯಪಾಲರ ಪರಿಚಯ ಮಾಡಿದರು. ಲಯನ್ ತಿಮ್ಮಯ್ಯ ಪಿಂಡಿಮನೆ ಸದಸ್ಯರ ಪರಿಚಯ ವಾಚಿಸಿದರು. ಕೋಶಾಧಿಕಾರಿ ಲಯನ್ ರಮೇಶ್ ಶೆಟ್ಟಿ ವಂದಿಸಿದರು. ಉಪಾಧ್ಯಕ್ಷ ಲಯನ್ ದೀಪಕ್ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನದ ಆತಿಥ್ಯವನ್ನು ಲಯನ್ ಸುಷ್ಮಾ ಮತ್ತು ಲಯನ್ ಆನಂದ ಪೂಜಾರಿ ಹಾಗೂ ರಾತ್ರಿ ಭೋಜನದ ವ್ಯವಸ್ಥೆ ಕರ್ನಲ್ ಶರತ್ ಭಂಡಾರಿ, ಲಯನ್ ಡಾ. ಯಂ.ಕೆ ರಘುರಾಮ್ ರವರು ಏರ್ಪಡಿಸಿದ್ದರು.ಲಯನ್ಸ್ ಮತ್ತು ಲಯನೆಸ್
ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.