ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸೇವೆಯ ಕುರಿತು ವಿವರ ನೀಡಿದ ಲಯನ್ ಭಾರತಿ ಬಿ.ಎಂ
ಅಂತರ್ ರಾಷ್ಟ್ರೀಯ ಸಂಸ್ಥೆಯ ಮೂಲಕ ಸಮಾಜ ಸೇವೆ ಮಾಡುವುದರೊಂದಿಗೆ ಸಾರ್ವಜನಿಕ ವಲಯದಲ್ಲಿ ಅವಶ್ಯಕತೆ ಇರುವ ವಿಷಯಗಳ ಬಗ್ಗೆ ಅವಲೋಕನ ಮಾಡಿಕೊಂಡು ಕೆಲಸ ಕಾರ್ಯಗಳನ್ನು ನಿಸ್ವಾರ್ಥ ವಾಗಿ ನೆರವೇರಿಸಿಕೊಂಡು ಬರುತ್ತಿದ್ದು ಸಂಸ್ಥೆಯ ಧ್ಯೇಯವಾಗಿದೆ ಎಂದು ಸುಳ್ಯ ಲಯನ್ಸ್ ಕ್ಲಬ್ಬಿಗೆ ಮಾ.22 ರಂದು ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದ ಸಂದರ್ಭದಲ್ಲಿ ಲಯನ್ ಭಾರತಿ ಬಿ.ಎಂ ರವರು ಲಯನ್ ಆನಂದ ಪೂಜಾರಿ ಯವರ ಕಚೇರಿ ಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸುಳ್ಯ ಲಯನ್ಸ್ ಕ್ಲಬ್ಬಿಗೆ 52 ವರ್ಷದ ಇತಿಹಾಸವಿದೆ ಸುಮಾರು 107 ಸದಸ್ಯರನ್ನು ಹೊಂದಿದ ಸಂಸ್ಥೆ ಇದಾಗಿದ್ದು ರಾಜ್ಯಪಾಲರ ಬೇಟಿಕಾರ್ಯಕ್ರಮದಡಿಯಲ್ಲಿ ಹಲವಾರು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಗೆ ಕ್ಲಬ್ ವತಿಯಿಂದ ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ, ಸುಳ್ಯದ ಕುರುಂಜಿಭಾಗ್ ನಲ್ಲಿ ಸುಮಾರು 4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಜೈ ಜವಾನ ಅಟೋ ರಿಕ್ಷಾ ನಿಲ್ದಾಣ, ಆಲೆಟ್ಟಿ ಗ್ರಾಮದ ಕೋಲ್ಚಾರಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಕ್ಲಬ್ ವತಿಯಿಂದ ಪೀಠೋಪಕರಣ ಮತ್ತು ವಿಜ್ಞಾನ ಉಪಕರಣಗಳ ಕೊಡುಗೆ, ಗಾಂಧಿನಗರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೈ ತೋಟದ ನಿರ್ಮಾಣ,ಕೊಡಿಯಾಲಬೈಲಿನಲ್ಲಿರುವ ಸ.ಹಿ.ಪ್ರಾ.ಶಾಲೆಯ ಆವರಣದಲ್ಲಿ 1 ಎಕ್ರೆ ಜಾಗದಲ್ಲಿ ನಿರ್ಮಿಸಿರುವ ಅಡಿಕೆ ತೋಟಕ್ಕೆ ನೀರಿನ ವ್ಯವಸ್ಥೆಗಾಗಿ ಬೋರ್ ವೆಲ್ ಪಂಪ್ ಉದ್ಘಾಟನೆ, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಪಯುಕ್ತ ಮಾಹಿತಿ ಒದಗಿಸುವ ಸಲುವಾಗಿ ಸ್ಮಾರ್ಟ್ ಟಿ ವಿ ಅಳವಡಿಸಲಾಗಿದ್ದು ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಲಯನ್ಸ್ ಕ್ಲಬ್ ಅದ್ಯಕ್ಷ ಲಯನ್ ರಾಮಕೃಷ್ಣ ರೈ,ಜಿಲ್ಲಾ ಕಾರ್ಯದರ್ಶಿ ಗೀತಾ ಆರ್. ರಾವ್, ಕಾರ್ಯದರ್ಶಿ ಲಯನ್ ರಾಮಚಂದ್ರ ಪಲ್ಲತಡ್ಕ, ಲಯನ್ ರೂಪಶ್ರೀ ಜೆ.ರೈ, ಲಯನ್ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.