ಕುಕ್ಕನ್ನೂರು ಉಳ್ಳಾಕುಲ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ಮಾ. 22ರಂದು ಬೆಳಿಗ್ಗೆ ಮುಹೂರ್ತ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಗೌಡ ಎನ್.ಎಸ್ ನಡುಬೆಟ್ಟು, ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾಸಮಿತಿಯ ಅಧ್ಯಕ್ಷ ಗಿರೀಶ್ ನಾಯಕ್, ಕಾರ್ಯದರ್ಶಿ ಸುದೀರ್ ರೈ, ಖಜಾಂಚಿ ಗಣೇಶ್ ರೈ, ರಾಘವ ಗೌಡ ಹುಲಿಮನೆ, ಗಂಗಾಧರ ಗೌಡ ಹುಲಿಮನೆ, ಗಂಗಾಧರ ಗೌಡ ಮಾರಡ್ಕ, ಧನಂಜಯ ಗೌಡ ಕಾಯರ, ಚಿದಾನಂದ ಗೋಪಾಲಕಜೆೆ, ಶಿವಪ್ರಸಾದ್ ನೀರಬಸಿರಿ, ಗೋಪಿನಾಥ್ ನೀರಬಸಿರಿ, ದಿನೇಶ್ ಹುಲಿಮನೆ, ವಿನಯಚಂದ್ರ ನಡುಬೆಟ್ಟು, ವೆಂಕಟೇಶ್ ನಡುಬೆಟ್ಟು, ವಿಶ್ವನಾಥ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು. ಕಾವೇರಿ ಇಂಡಸ್ಟ್ರೀಸ್ ನ ಭವಾನಿಶಂಖರ ಕುಕ್ಕೇಟಿಯವರು ಈ ಶಾಶ್ವತ ಚಪ್ಪರದ ಕೆಲಸವನ್ನು ನಿರ್ವಹಿಸಲಿದ್ದಾರೆ.

