ಕೃಷಿಯಲ್ಲಿ ಪ್ರೊಫೇಶನಲ್ ಆಗಿ ತೊಡಗಿಸಿಕೊಂಡರೆ ಯಶಸ್ಸು ಖಂಡಿತ : ಟಿ. ಆರ್. ಸುರೇಶ್ಚಂದ್ರ

ಹಳದಿ ರೋಗ ಬಂತೆಂದು ಊರು ಮತ್ತು ಕೃಷಿ ಬಿಡುವ ಬದಲು ಕೃಷಿಯಲ್ಲಿ ಪ್ರೊಫೇಶನಲ್ ಆಗಿ ತೊಡಗಿಸಿಕೊಳ್ಳಿ. ಆಗ ಯಶಸ್ಸು ಖಂಡಿತ. ಕೃಷಿ ಭೂಮಿಯ ಮಣ್ಣಿಗೆ ಶಕ್ತಿ ಇದೆ. ಯಾವುದೇ ಕೃಷಿಯನ್ನು ಮಾಡುವ ಮೊದಲು ಅದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕು. ಬೀಜ ಅಥವಾ ಗಿಡ ಆಯ್ಕೆ ಮಾಡುವಾಗ ಜಗರೂಕವಾಗಿರಬೇಕು ಎಂದು
ಕೃಷಿಕ ಟಿ.ಆರ್.ಸುರೇಶ್ಚಂದ್ರ, ತೊಟ್ಟೆತ್ತೋಡಿ ಕಲ್ಮಡ್ಕ ಹೇಳಿದರು. ಅವರು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಇಂದು (ಮಾ.20 ರಂದು) ನಡೆದ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕೃಷಿ ಮಾಹಿತಿ ಕಾರ್ಯಾಗಾರವು ಮಡಪ್ಪಾಡಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು.
ಕಾರ್ಯಾಗಾರದ ಉದ್ಘಾಟನೆಯನ್ನು ಕೃಷಿಕ ಯತೀಶ್ ಗೋಳ್ಯಾಡಿ ನೇರವೇರಿಸಿದರು
ಸಂಘದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಅಧ್ಯಕ್ಷತೆ ವಹಿಸಿದ್ದರು.
ಮಡಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಉಷಾ ಜಯರಾಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಸಚಿನ್ ಬಳ್ಳಡ್ಕ, ನಿರ್ದೇಶಕರುಗಳಾದ ಪಿ. ಸಿ. ಜಯರಾಮ, ಸೋಮಶೇಖರ ಕೇವಳ, ಮಿತ್ರದೇವ ಮಡಪ್ಪಾಡಿ, ಕರುಣಾಕರ ಪಾರೆಪ್ಪಾಡಿ, ಚಂದ್ರಶೇಖರ ಗುಡ್ಡೆ, ಪ್ರವೀಣ ಯತೀಂದ್ರನಾಥ ಪಾಲ್ತಾಡು, ಶಕುಂತಲಾ ಕೇವಳ, ಶಿವರಾಮ ಚಿರೆಕಲ್ಲು, ಆನಂದ ಎಸ್., ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಕಾರ್ಯಕ್ರಮ ನಿರ್ವಹಿಸಿದರು.
ಈ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಹಾಗೂ ಭೂಮಿಯ ಫಲವತ್ತತೆಯ ಸಂವರ್ಧನೆ ಗೋ ನಂದಾಜಲ ತಯಾರಿಯ ಕುರಿತಾಗಿ ಕೃಷಿಕರಾದ ಪ್ರವೀಣ ಸರಳಾಯ, ಉಪಬೆಳೆಯಾಗಿ ಕಾಳುಮೆಣಸು, ಜಾಯಿಕಾಯಿ ಬೆಳೆಯುವ ವಿಧಾನ ಕುರಿತಾಗಿ ಕೃಷಿಕರಾದ ಟಿ.ಆರ್. ಸುರೇಶ್ಚಂದ್ರ, ತೊಟ್ಟೆತ್ತೋಡಿ ಕಲ್ಮಡ್ಕ, ತಾಳೆ ಕೃಷಿ ಮತ್ತು ಅಡಿಕೆ ಜೊತೆ ಉಪಬೆಳೆಯಾಗಿ ಕಾಫಿ ಕೃಷಿ ಬಗ್ಗೆ ಕೃಷಿಕ ನಿತಿನ್ ಪೂಂಬಾಡಿ ಮಾಹಿತಿಯನ್ನು ನೀಡಿದರು.