ಕ್ರೀಡೋತ್ಸವ, ಬೀಳ್ಕೊಡುಗೆ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ
ಶಾಲಾ ಮಕ್ಕಳ ಎಲ್ಲಾ ಪೋಷಕರಿಗೆ ಗೌರವಾರ್ಪಣೆ – ಶಿಕ್ಷಕರಿಗೆ ಸನ್ಮಾನ
ಮಕ್ಕಳಲ್ಲಿ ಇರುವ ಪ್ರತಿಭೆ, ಸಾಮಥ್ರ್ಯ ೯ ವನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ಶಾಸಕಿ ಭಾಗೀರಥಿ ಮುರುಳ್ಯ
ಸಂಜೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಮಕ್ಕಳಲ್ಲಿ ಇರುವ ಪ್ರತಿಭೆ, ಸಾಮಥ್ರ ೯ವನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವೃತ್ತಿ ಬದುಕಿನ ಶಿಕ್ಷಣ ಮನೆಯಲ್ಲಿ ಸಿಗುವಂತಾಗಬೇಕು. ಸಾಧಕರ ಜೊತೆಗೆ ನಮ್ಮ ಮನೆಯ ಹಿರಿಯರ ಉತ್ತಮ ಗುಣಗಳನ್ನು ಮಕ್ಕಳಿಗೆ ಮಾರ್ಗದರ್ಶನ ಮಾಡಿಕೊಂಡು ವಿದ್ಯಾರ್ಥಿಗಳನ್ನು ಬೆಸಲೆಸಬೇಕು. ಎಂದು ಸುಳ್ಯದ ಶಾಸಕಿ ಕು| ಭಾಗೀರಥಿ ಮುರುಳ್ಯ ಹೇಳಿದರು. ಅವರು ಮರ್ಕಂಜ ದ ಮಿತ್ತಡ್ಕ ಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವೃದ್ಯಾಪ್ಯದಲ್ಲಿ ತಂದೆತಾಯಿಗಳನ್ನು ನೋಡಿಕೊಳ್ಳುವಂತಹ ಶಿಕ್ಷಣ ಮನೆಯಲ್ಲಿ ಸಿಗಬೇಕುವಂತಾಗಬೇಕು. ಪಾಠದ ಜೊತೆಗೆ ಸಮಾಜದ ಆಗು ಹೋಗುಗಳನ್ನು ತಿಳಿದು ಕೊಳ್ಳಬೇಕು ಎಂದು ಅವರು ಹೇಳಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ-ಮರ್ಕಂಜ ಹಾಗೂ ಹಳೆ ವಿದ್ಯಾರ್ಥಿ ಸಂಘ ಇದರ ಸಹಯೋಗದಲ್ಲಿ ಕ್ರೀಡೋತ್ಸವ, ಬೀಳ್ಕೊಡುಗೆ, ಸನ್ಮಾನ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ಮಕ್ಕಳ ಎಲ್ಲಪೋಷಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಇಂದು ಮಿತ್ತಡ್ಕ ಶಾಲಾ ವಠಾರದಲ್ಲಿ ಇಂದು ನಡೆಯಿತು.
ಪ್ರತಿಭಾ ಪುರಸ್ಕಾರ ಸಮಾರಂಭದ ಸಭಾಧ್ಯಕ್ಷತೆಯನ್ನು ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ ವಹಿಸಿದ್ದರು.
ಉದ್ಘಾಟನೆಯನ್ನು ಮರ್ಕಂಜ ಯೋಗೀಶ್ವರ ಸಿದ್ಧಮಠ ಅನ್ನಪೂರ್ಣೇಶ್ವರಿ ಕ್ಷೇತ್ರ ಇಲ್ಲಿಯ ರಾಜೇಶನಾಥ ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಮರ್ಕಂಜ ಗ್ರಾ.ಪಂ. ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಪವಿತ್ರ ಗುಂಡಿ, ಮರ್ಕಂಜ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಗೋವಿಂದ ಅಳವುಪಾರೆ, ಅರಂತೋಡು ಜಿ.ಪಂ.ಕ್ಷೇತ್ರದ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು – ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂಯೋಷ್ ಕುತ್ತಮೊಟ್ಟೆ, ಉಡುಪಿ ಜಿಲ್ಲಾ ಒಕ್ಕಲಿಗರ ಸಂಘದ ಖಜಾಂಜಿ, ಹಳೆ ವಿದ್ಯಾರ್ಥಿ ಹೇಮಾನಂದ ಹಲ್ದಡ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯರಾಮ ಕೊಚ್ಚಿಕಾನ, ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ, ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಅಡ್ಕಬಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ, ಶಿಕ್ಷಕರಾದ ರೋಹಿಣಿ ಕೆ., ನಾಗ ಶೆಟ್ಟಿ, ಶ್ರೀಮತಿ ವೀಣಾ, ಸವಿತಾ ಕುಮಾರಿ, ಅಶ್ವಿನಿ, ಪೂರ್ಣರವರನ್ನು ಶಾಸಕರು ಹಳೆ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಿದರು.
ಕೊಲ್ಲಮೊಗ್ರ ಕೆವಿಜಿ ಪ್ರೌಢಶಾಲೆಯ ಶಿಕ್ಷಕ ರಾಜೇಶ್ ಮಾಸ್ತರ್ ಶಿಕ್ಷಕರ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿಗೆ ಸಹಕರಿಸಿದ ಮರ್ಕಂಜ ಗ್ರಾ.ಪಂ.ಮಾಜಿ ಅಧ್ಯಕ್ಷೆ ಪವಿತ್ರ ಗುಂಡಿ ಮತ್ತು ಮಾಜಿ ಉಪಾಧ್ಯಕ್ಷ ಗೋವಿಂದ ಅಳವುಪಾರೆಯವರನ್ನು ಸನ್ಮಾನಿಸಲಾಯಿತು. ಹಾಗೂ ಶಾಸಕಿ ಭಾಗೀರಥಿ ಮುರುಳ್ಯರವರನ್ನು ಗೌರವಿಸಲಾಯಿತು. ಅಲ್ಲದೇ ವಿಶೇಷವಾಗಿ ಮಕ್ಕಳ ಎಲ್ಲಾ ಪೋಷಕರಿಗೆ ಗೌರವಾರ್ಪಣೆ ನಡೆಯಿತು.
ಬಳಿಕ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಪ್ರಣನ್ಯ ಕುದ್ಪಾಜೆ ಇವರಿಂದ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಿತು.
ಪೂರ್ವಾಹ್ನ 9.00 ಗಂಟೆಗೆ ಕ್ರೀಡಾಕೂಟದ ಉದ್ಘಾಟನೆ ನಡೆಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಮಿತ್ತಡ್ಕ- ಮರ್ಕಂಜ ಇದರ ಅಧ್ಯಕ್ಷ ಜಯರಾಮ ಕೊಚ್ಚಿಕ್ಕಾನ ವಹಿಸಿದ್ದರು. ಉದ್ಘಾಟನೆಯನ್ನು ಬೆಂಗಳೂರು ರಕ್ಷಣಾ ಅಧಿಕಾರಿ ಮತ್ತು ಅಭಿವೃದ್ಧಿ ಸಂಸ್ಥೆ ಇದರ ನಿವೃತ್ತ ತಾಂತ್ರಿಕ ಅಧಿಕಾರಿ ಹಾಗೂ ಶಾಲಾ ಹಳೆ ವಿದ್ಯಾರ್ಥಿ ದಿನೇಶ್ ಜೋಗಿಮೂಲೆ ನೆರವೇರಿಸಿದರು.
ಮರ್ಕಂಜ ಗ್ರಾ.ಪಂ.ಸದಸ್ಯ ಯಶವಂತ ಸೂಟೆಗದ್ದೆ, ಅರಂತೋಡು ಸಮೂಹ ಸಂಪನ್ಮೂಲ ಕೇಂದ್ರ ಇಲ್ಲಿಯ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ, ಮರ್ಕಂಜ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ ಮಾವಜಿ, ಮರ್ಕಂಜ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ ಗೌಡ ಬಾಣೂರು, ದಾಸರಬೈಲು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪದ್ಮನಾಭ ಗೌಡ ನಿಡ್ಯಮಲೆ, ಮುಡ್ನೂರು – ಮರ್ಕಂಜ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಕಾಂತ ಬೂಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಳಿಕ ಸಾರ್ವಜನಿಕ ರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಮುಖ್ಯೋಪಾಧ್ಯಾಯ ಬಾಲಕೃಷ್ಣ ರವರು ಸ್ವಾಗತಿಸಿದರು. ಶಿಕ್ಷಕಿ ರೋಹಿಣಿ ವಂದಿಸಿದರು. ನಿತ್ಯಾನಂದ ಭೀಮಗುಳಿ, ನವೀನ್ ಬಾಂಜಿಕೋಡಿ, ವೀಣಾ ಬಾಣೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಲ್ಲಿ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ ಗುಳಿಗಮೂಲೆ.