ಡಿ 31 ಬೆಳ್ಳಾರೆಯಲ್ಲಿ ಎಸ್ ಎಸ್ ಎಫ್ ಸುಳ್ಯ ಡಿವಿಝನ್ ಮಟ್ಟದ ಸಾಹಿತ್ಯೋತ್ಸವ

0

ಸುಳ್ಯ ವ್ಯಾಪ್ತಿಯ 26 ಶಾಖೆಗಳ 300ಕ್ಕೂ ಹೆಚ್ಚು ಪ್ರತಿಭೆಗಳಿಂದ 118 ಸ್ಪರ್ಧೆಗಳು ನಡೆಯಲಿದೆ : ಕಬೀರ್ ಜಟ್ಟಿಪಳ್ಳ

ಎಸ್ ಎಸ್ ಎಫ್ ವತಿಯಿಂದ ಸುಳ್ಯ ಡಿವಿಷನ್ ಮಟ್ಟದ ಎಸ್ ಎಸ್ ಎಫ್ ಸುಳ್ಯ ಸಾಹಿತ್ಯೋತ್ಸವ ಡಿಸೆಂಬರ್ 31 ರಂದು ಬೆಳ್ಳಾರೆ ತಂಬಿನಮಕ್ಕಿ ದಾರುಲ್ ಹುದಾ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಮುಖಂಡರು ಇಂದು ಸುಳ್ಯ ಪ್ರಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಎಸ್ ಎಸ್ ಎಫ್ ಸಂಘಟನೆಯ ಮುಖಂಡ ಅಹಮದ್ ಕಬೀರ್ ಜಟ್ಟಿಪಳ್ಳ ‘ಕಳೆದ ಕೆಲವು ದಿನಗಳ ಹಿಂದೆ ಸೆಕ್ಟರ್ ಮಟ್ಟದ ಸಾಹಿತ್ಯೋತ್ಸವ ಸುಳ್ಯದ ವಿವಿಧ ಶಾಖೆಗಳಲ್ಲಿ ನಡೆದಿದ್ದು ಇಲ್ಲಿ ವಿಜೇತರಾಗಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವ ಪ್ರತಿಭೆಗಳು ಬೆಳ್ಳಾರೆಯಲ್ಲಿ ನಡೆಯಲಿರುವ ಡಿವಿಜನ್ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ನೀಡಲಿದ್ದಾರೆ.ಈ ಸಾಹಿತ್ಯೋತ್ಸವ ಸ್ಪರ್ಧೆಯಲ್ಲಿ ಸುಳ್ಯದ 26 ಶಾಖೆಗಳಿಂದ 4 ಸೆಕ್ಟರ್ಗಳ 300ಕ್ಕೂ ಹೆಚ್ಚು ಪ್ರತಿಭೆಗಳು ಭಾಗವಹಿಸಲಿದ್ದು ಐದು ವಿಭಾಗಗಳಲ್ಲಿ 118 ಸ್ಪರ್ಧೆಗಳು ನಡೆಯಲಿದೆ ಎಂದು ಹೇಳಿದರು.

ಡಿಸೆಂಬರ್ 31ರಂದು ಬೆಳಿಗ್ಗೆ 8 ಗಂಟೆಗೆ ಬೆಳ್ಳಾರೆ ದರ್ಗಾ ಶರೀಫಿನಲ್ಲಿ ಪ್ರಾರ್ಥನೆ ನೆರವೇರಿಸಿ ಬಳಿಕ ದಾರುಲ್ ಹುದಾ ತಂಬಿನಮಕ್ಕಿ ವಿದ್ಯಾಸಂಸ್ಥೆಯಲ್ಲಿ 8:30ಕ್ಕೆ ದ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಧ್ವಜಾರೋಹಣವನ್ನು ಸ್ಥಳೀಯ ಸಂಸ್ಥೆಯ ಮ್ಯಾನೇಜರ್ ಖಲೀಲ್ ಹಿಮಮಿ ನೆರವೇರಿಸಲಿದ್ದು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಅಬುದಾಬಿ ಝೋನಲ್ ಅಧ್ಯಕ್ಷ ಹಸೈನಾರ್ ಅಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.


ಸಂಜೆ ಸಮಾರೋಪ ಸಮಾರಂಭಗೊಳ್ಳಲಿದು ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ, ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಸಾಹಿತ್ಯೋತ್ಸವ ಸಮಿತಿಯ ಚೇರ್ಮನ್ ಅಬೂಬಕ್ಕರ್ ಸಿದ್ದೀಕ್ ಹಿಮಮಿ ಸಕಾಫಿ,ಮೀಡಿಯಾ ಕನ್ವೀನರ್ ಕಬೀರ್ ಹಿಮಮಿ ಸಕಾಫಿ,ಫೈನಾನ್ಸ್ ಸೆಕ್ರೆಟರಿ ಶರೀಫ್ ಜಯನಗರ, ಕನ್ವೀನರ್ ಸಿದ್ದಿಕ್ ಎಲಿಮಲೆ ಉಪಸ್ಥಿತರಿದ್ದರು.