
ಪುತ್ತೂರು ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ಜ.3 ರಂದು ಮುಂಜಾನೆ ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ನುಗ್ಗಿ ಹತ್ತು ಬಾಳೆ ನಾಲ್ಕು ದೀವಿ ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ, ಕೊಂಬೆಗಳನ್ನು ಮುರಿದು ತಿಂದಿದೆ.









ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾ ಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ಹಾನಿಗೊಳಿಸಿ ಪುನಃ ಮುಗೇರಿನ ಕಡೆಗೆ ತೆರಳಿದೆ. ಈಗಾಗಲೇ ಈ ಆನೆಯನ್ನು ಹಿಡಿದು ಬೇರೆಡೆಗೆ ಸಾಗಿಸುವ ಕೆಲಸ ಆಗಬೇಕೆಂದು ಕೃಷಿಕರು ಆಗ್ರಹಿಸುತ್ತಾರೆ. ಇನ್ನಷ್ಟು ಕೃಷಿ ಹಾನಿಗೊಳಿಸುವ ಸಾಧ್ಯತೆ ಇದ್ದು ಕೃಷಿಕರ ರಾತ್ರಿ ತೋಟಕ್ಕೆ ಹೋಗದಂತೆ ಎಚ್ಚರದಿಂದಿದ್ದು ಪ್ರಾಣ ಹಾನಿಯಾಗದಂತೆ ಜಾಗೃತೆವಹಿಸುವಂತೆ ಅರಣ್ಯ ಇಲಾಖೆಯವರು ಸಲಹೆ ನೀಡಿದ್ದಾರೆ.












